ಉಪಚುನಾವಣೆ ಮುನ್ನ ಸಂಪುಟ ಸರ್ಜರಿ; ಇಬ್ಬರು ಸಚಿವರ ಖಾತೆ ದಿಢೀರ್ ಬದಲು

ಆರೋಗ್ಯ ಇಲಾಖೆ ಸಮನ್ವಯದ ಸಮಸ್ಯೆಗೆ ಸಿಎಂ ಯಡಿಯೂರಪ್ಪ ಕೊನೆಗೂ ಪರಿಹಾರ ಕಂಡು ಹಿಡಿದಿದ್ದಾರೆ. ಕೋರೊನಾ ಉಲ್ಬಣಗೊಂಡಿದ್ದಾಗ ಆರೋಗ್ಯ ಇಲಾಖೆ ಎಡವಟ್ಟಿನಿಂದ, ನಿರ್ಲಕ್ಷ್ಯದಿಂದ ಬಹಳ ಸಮಸ್ಯೆ ಆಗಿದ್ದನ್ನ ನೋಡಿದ್ದೇವೆ. ಕೊನೆಗೂ ಸಮಸ್ಯೆ ಪರಿಹರಿಸಲು ಸಿಎಂ ಮುಂದಾಗಿದ್ದಾರೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಅ. 12): ಆರೋಗ್ಯ ಇಲಾಖೆ ಸಮನ್ವಯದ ಸಮಸ್ಯೆಗೆ ಸಿಎಂ ಯಡಿಯೂರಪ್ಪ ಕೊನೆಗೂ ಪರಿಹಾರ ಕಂಡು ಹಿಡಿದಿದ್ದಾರೆ. ಕೋರೊನಾ ಉಲ್ಬಣಗೊಂಡಿದ್ದಾಗ ಆರೋಗ್ಯ ಇಲಾಖೆ ಎಡವಟ್ಟಿನಿಂದ, ನಿರ್ಲಕ್ಷ್ಯದಿಂದ ಬಹಳ ಸಮಸ್ಯೆ ಆಗಿದ್ದನ್ನ ನೋಡಿದ್ದೇವೆ. ಕೊನೆಗೂ ಸಮಸ್ಯೆ ಪರಿಹರಿಸಲು ಸಿಎಂ ಮುಂದಾಗಿದ್ದಾರೆ. 

ಬಿಗ್ ಬ್ರೇಕಿಂಗ್: ಬಿಎಸ್‌ವೈ ಸಂಪುಟದಲ್ಲಿ ಮಹತ್ವದ ಬದಲಾವಣೆ

ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್‌ಗೆ ಶ್ರೀ ರಾಮುಲು ಬಳಿ ಇರುವ ಆರೋಗ್ಯ ಇಲಾಖೆ ಜವಾಬ್ದಾರಿ ವಹಿಸಲಾಗಿದೆ. ಶ್ರೀರಾಮುಲು ಅವರಿಗೆ ಸಮಾಜ ಕಲ್ಯಾಣ ಇಲಾಖೆ ಜವಾಬ್ದಾರಿ ನೀಡಲು ನಿರ್ಧರಿಸಲಾಗಿದೆ. ಬದಲಾವಣೆ ಸಂಬಂಧ ಇಂದು ಅಧಿಕೃತ ಆದೇಶ ಹೊರ ಬೀಳಲಿದೆ. 

ಇನ್ನು ಮುಂದೆ ಡಾ. ಸುಧಾಕರ್ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಖಾತೆಗಳನ್ನು ನಿಭಾಯಿಸಲಿದ್ದಾರೆ. ಶ್ರೀರಾಮುಲು ಸಮಾಜ ಕಲ್ಯಾಣ ಇಲಾಖೆ ನಿಭಾಯಿಸಲಿದ್ದಾರೆ. 

Related Video