ಗಂಗಾವತಿ ಗೃಹಪ್ರವೇಶ.. ಕಲ್ಯಾಣ ಪ್ರಗತಿ ಪಕ್ಷ.. ಜನಾರ್ಧನ ರೆಡ್ಡಿ ಹೊಸ ಆಟ!

ಏಕಾಂಗಿಯಾದ್ರಾ ಗಣಿಧಣಿ ಜನಾರ್ಧನ ರೆಡ್ಡಿ.. ಆಪ್ತಮಿತ್ರನಿಂದ ಆಪ್ತಸ್ನೇಹಿತನೂ ಜೊತೆಗಿದ್ದ ಅಣ್ತಾಮ್ಮಾಸ್ ಕೂಡ ರೆಡ್ಡಿಯಿಂದ ದೂರ.. ಅತ್ಯಾಪ್ತನ ಮನೆ ಗೃಹಪ್ರವೇಶಕ್ಕೂ ಬರಲಿಲ್ಲ ಬಳ್ಳಾರಿ ಬುಲ್ಲೋಡು. ಒಂದೇ ಗೂಡಿನ ಹಕ್ಕಿಗಳನ್ನು ದೂರವಾಗಿಸಿತಾ ಗಣಿ ರೆಡ್ಡಿಯ ರಾಜಕೀಯ ಚದುರಂಗ..? ಆಂಜನೇಯನ ಜನ್ಮಸ್ಥಳದಲ್ಲಿ ನಿಂತು ರೆಡ್ಡಿ ಮಾಡಿದ ಶಪಥ ಎಂಥದ್ದು..?

First Published Dec 15, 2022, 11:59 AM IST | Last Updated Dec 15, 2022, 11:59 AM IST

ಏಕಾಂಗಿಯಾದ್ರಾ ಗಣಿಧಣಿ ಜನಾರ್ಧನ ರೆಡ್ಡಿ.. ಆಪ್ತಮಿತ್ರನಿಂದ ಆಪ್ತಸ್ನೇಹಿತನೂ ಜೊತೆಗಿದ್ದ ಅಣ್ತಾಮ್ಮಾಸ್ ಕೂಡ ರೆಡ್ಡಿಯಿಂದ ದೂರ.. ಅತ್ಯಾಪ್ತನ ಮನೆ ಗೃಹಪ್ರವೇಶಕ್ಕೂ ಬರಲಿಲ್ಲ ಬಳ್ಳಾರಿ ಬುಲ್ಲೋಡು. ಒಂದೇ ಗೂಡಿನ ಹಕ್ಕಿಗಳನ್ನು ದೂರವಾಗಿಸಿತಾ ಗಣಿ ರೆಡ್ಡಿಯ ರಾಜಕೀಯ ಚದುರಂಗ..? ಆಂಜನೇಯನ ಜನ್ಮಸ್ಥಳದಲ್ಲಿ ನಿಂತು ರೆಡ್ಡಿ ಮಾಡಿದ ಶಪಥ ಎಂಥದ್ದು..? ಇದೇ ಇವತ್ತಿನ ಸುವರ್ಣ ಸ್ಪೆಷಲ್, RR ಬಿರುಕು ರಹಸ್ಯ. ಹಾಗಾದ್ರೆ ಏನ್ಮಾಡ್ತಾರೆ ರೆಡ್ಡಿ..? ಹೇಗಿರಲಿದೆ ಗಣಿಧಣಿಯ ಹೊಸ ಪಕ್ಷ..? ರೆಡ್ಡಿ ಚದುರಂಗದಿಂದ ಯಾರ ಶಕ್ತಿ ಭಂಗ..? ಜನಾರ್ಧನ ರೆಡ್ಡಿಯಿಂದ ಆಪ್ತಮಿತ್ರ ಶ್ರೀರಾಮುಲು ದೂರವಾಗಿದ್ದಾರೆ. ಜೊತೆಗಿದ್ದ ಸಹೋದರರರೂ ರಾಜಕೀಯದಾಟಕ್ಕೆ ಸಾಥ್ ಕೊಡ್ತಿಲ್ಲ. ಹಾಗಾದ್ರೆ ಈಗೇನ್ಮಾಡ್ತಾರೆ ಗಣಿ ರೆಡ್ಡಿ..? ಹೇಗಿರಲಿದೆ ಗಣಿಧಣಿಯ ಹೊಸ ಪಕ್ಷ..? 

ರೆಡ್ಡಿ ಚದುರಂಗದಿಂದ ಯಾರ ಶಕ್ತಿ ಭಂಗ..? ರಣರಂಗದಲ್ಲಿ ರೆಡ್ಡಿ ಚದುರಂಗದ ಅಸಲಿ ರಹಸ್ಯ ಇಲ್ಲಿದೆ. ಆಪ್ತ ಸ್ನೇಹಿತನೂ ಜೊತೆಗಿಲ್ಲ, ಸಹೋದರರು ಸಾಥ್ ಕೊಡ್ತಿಲ್ಲ. ಹಾಗಾದ್ರೆ ಜನಾರ್ಧನ ರೆಡ್ಡಿ ಯಾರನ್ನು ನಂಬ್ಕೊಂಡು ಹೊಸ ಪಕ್ಷ ಕಟ್ಟಲು ಹೊರಟಿದ್ದಾರೆ..? ಹೊಸ ಪಕ್ಷ ಕಟ್ಟಲು ಮುಂದಾಗಿರುವ ಗಣಿರೆಡ್ಡಿಯಿಂದ ಆಪ್ತಸ್ನೇಹಿತ ಶ್ರೀರಾಮುಲು ದೂರವಾಗಿದ್ದಾರೆ. ಬಿಜೆಪಿಯಲ್ಲಿರೋ ಸಹೋದರ ಶಾಸಕರಿರಿಂದಲೂ ರೆಡ್ಡಿ ಸಹಕಾರ ಸಿಗ್ತಿಲ್ಲ. ಹಾಗಾದ್ರೆ ರೆಡ್ಡಿ ಯಾರನ್ನು ನಂಬ್ಕೊಂಡು ಹೊಸ ಪಕ್ಷ ಕಟ್ಟಲು ಹೊರಟಿದ್ದಾರೆ?. ರಾಜ್ಯದಲ್ಲಿ ಹೊಸ ಪಕ್ಷ ಕಟ್ಟಿ ಯಾರೂ ಯಶಸ್ಸು ಕಂಡ ಇತಿಹಾಸವೇ ಇಲ್ಲ. ಬಂಗಾರಪ್ಪ, ಯಡಿಯೂರಪ್ಪನವರೇ ಈ ವಿಚಾರದಲ್ಲಿ ಸೋತು ಹೋಗಿದ್ದಾರೆ. ಅಂಥದ್ರಲ್ಲಿ ರೆಡ್ಡಿ ಸಕ್ಸಸ್ ಆಗ್ತಾರಾ...? ಕಾದು ನೋಡೋಣ.