ಯಾರೇ ಪ್ರಯತ್ನಿಸಿದ್ದರೂ ರಾಜಕೀಯ ವಿರೋಧಿಗಳ ಬಗ್ಗೆ ಒಂದೇ ಒಂದು ಕೆಟ್ಟ ಮಾತಾಡದ ಎಸ್‌.ಎಂ ಕೃಷ್ಣ

ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರ ಅಂತ್ಯಕ್ರಿಯೆ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು.  ವರ್ಣರಂಜಿತ ರಾಜಕಾರಣಿಯ ಬದುಕಿನ ಹಲವು ಮಜಲುಗಳು ಸೇರಿದಂತೆ ಇಂದಿನ ಪ್ರಮುಖ ಸುದ್ದಿಗಳ ಬಗ್ಗೆ ವಿವರವಾದ ಮಾಹಿತಿ ನ್ಯೂಸ್ ಅವರ್‌ನಲ್ಲಿ ಇದೆ ವೀಕ್ಷಿಸಿ. 

First Published Dec 11, 2024, 11:57 PM IST | Last Updated Dec 12, 2024, 12:02 AM IST

ಇಂದು ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಹುಟ್ಟೂರು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ನಡೆಯಿತು. ಪ್ರಯತ್ನಿಸಿದ್ದರೂ ಕೂಡ ಕೃಷ್ಣ ಅವರ ಬಾಯಿಯಿಂದ ಅವರ ರಾಜಕೀಯ ವಿರೋಧಿಗಳ ಬಗ್ಗೆ ಒಂದು ಕೆಟ್ಟ ಶಬ್ಧವನ್ನು ಹುಟ್ಟಿಸಲು ಸಾಧ್ಯವಾಗುತ್ತಿರಲಿಲ್ಲ, ಏನು ತಿಪ್ಪರಲಾಗ ಹಾಕಿದರು ಕೃಷ್ಣ ಅವರು ಸಿಟ್ಟು ಮಾಡಿಕೊಂಡು ಕೂಗಾಡುವ ಒಂದೇ ಒಂದು ವೀಡಿಯೋ ಸಿಗುತ್ತಿರಲಿಲ್ಲ, ಇಂತಹ ಮಹಾನ್‌ ವ್ಯಕ್ತಿಯ ಅಂತ್ಯ ಸಂಸ್ಕಾರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಪಕ್ಷಬೇಧ ತೊರೆದು ಭಾಗಿಯಾಗಿದ್ದರು. 

ವಯನಾಡ್‌ನಲ್ಲಿ ಜುಲೈ 30ನೇ ತಾರೀಕು ಭೂಕುಸಿತ ಉಂಟಾಗಿತ್ತು. ಈ ಘಟನೆಯಲ್ಲಿ 200ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದರು.  ಆಗ ಅದು ರಾಹುಲ್ ಗಾಂಧಿಯವರ ಕ್ಷೇತ್ರವಾಗಿದ್ದರೆ ಈಗ ಅದು ಪ್ರಿಯಾಂಕಾ ಗಾಂಧಿಯವರ ಕ್ಷೇತ್ರವಾಗಿದೆ. ಆ ಘಟನೆ ನಡೆದಾಗ ಸಿದ್ದರಾಮಯ್ಯ ಅಲ್ಲಿ 100 ಮನೆಗಳನ್ನು ಕಟ್ಟಿಸಿ ಕೊಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಕೇರಳ ಸರ್ಕಾರಕ್ಕೆ ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಡುವ ಆಸಕ್ತಿ ಇಲ್ಲ, ಹೀಗಿರುವಾಗ ಕರ್ನಾಟಕ ರಾಜ್ಯ ಸರ್ಕಾರ ಕೇರಳ ಸರ್ಕಾರಕ್ಕೆ ಪತ್ರ ಬರೆದಿದ್ದು, ಜಾಗ ತೋರಿಸಿಕೊಡಿ ಬೇಕಾದರೆ ಜಾಗದ ಹಣವನ್ನು ನಾವೇ ಕೊಡುತ್ತೇವೆ ಎಂದು ಹೇಳಿದೆ. ಆದರೆ ಕರ್ನಾಟಕ ಸರ್ಕಾರದ ಹಣ ಕೇರಳದ ಜನರ ಪುನರ್ವಸತಿಗೆ ಏಕೆ ಹೋಗಬೇಕು ಎಂಬುದು ಇಲ್ಲಿ ಪ್ರಶ್ನೆಯಾಗಿದ್ದು, ಹೊಸ ವಿವಾದ ಸೃಷ್ಟಿಯಾಗಿದೆ. ಊರಿಗೆ ಉಪಕಾರಿ ಮನೆಗೆ ಮಾರಿಯಂತೆ ವರ್ತಿಸುತ್ತಿದ್ದೀರಿ ಎಂದು ರಾಜ್ಯದ ವಿಪಕ್ಷ ನಾಯಕರು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.

ಈ ವಿವರವೂ ಸೇರಿದಂತೆ ಇಡೀ ದಿನದ ಪ್ರಮುಖ ಸುದ್ದಿಗಳ ಕಂಪ್ಲೀಟ್ ನ್ಯೂಸ್ ಪ್ಯಾಕೇಜ್ ನ್ಯೂಸ್‌ ಅವರ್‌ನಲ್ಲಿ ನೋಡಿ