ಅಶ್ಲೀಲ ವಿಡಿಯೋ ವೈರಲ್.."ಅಖಿಲ ಕರ್ನಾಟಕಕ್ಕೆ ಹಂಚಿಕೆದಾರ" ಯಾರು..? ಪೆನ್‌ಡ್ರೈವ್ ಪುರಾಣಕ್ಕೆ ಹೊಸ ಟ್ವಿಸ್ಟ್..!

ಪ್ರಜ್ವಲ್ ರೇವಣ್ಣ ಬೇಟೆಗೆ ಎದ್ದು ನಿಂತಿದೆ ಅಂತರಾಷ್ಟ್ರೀಯ ಚಕ್ರವ್ಯೂಹ..!
ಪೆನ್‌ಡ್ರೈವ್ ಪುರಾಣ ಬಯಲಾಗ್ತಿದ್ದಂತೆ ವಿದೇಶಕ್ಕೆ ಎಸ್ಕೇಪ್ ಆಗಿದ್ದ ಪ್ರಜ್ವಲ್..!
"ಪ್ರಕರಣದ ಕಥಾನಾಯಕ ಕಾಂಗ್ರೆಸ್ ಸರ್ಕಾರ"ಅಂದ ವಕೀಲ ದೇವರಾಜೇಗೌಡ..!

Share this Video
  • FB
  • Linkdin
  • Whatsapp

ಅಶ್ಲೀಲ ವಿಡಿಯೋ ಸುಳಿಯಲ್ಲಿ ಸಿಕ್ಕಾಕಿಕೊಂಡಿರೋ ಪೆನ್‌ಡ್ರೈವ್(Pendrive) ಪುರಾಣದ ಸೂತ್ರಧಾರ. ನೂರಾರು ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡು 2,976 ಸಾವಿರಾರು ವಿಡಿಯೋಗಳನ್ನು ಮಾಡ್ಕೊಂಡಿರೋ ಆರೋಪ ಎದುರಿಸ್ತಾ ಇರೋ ಹಾಸನದ(Hassan) ಹಮ್ಮೀರ. ಮಗನ ಎಡವಟ್ಟಿನಿಂದ ಅಪ್ಪನಿಗೂ ಎದುರಾಯ್ತು ಸಂಚಕಾರ. ಅಪ್ಪ ಅರೆಸ್ಟ್ ಆಗಿದ್ದಾಯ್ತು..Next ಟಾರ್ಗೆಟ್ ಮಗ. ಎಸ್ಕೇಪ್ ಆಗೋ ದಾರಿಗಳಲ್ಲಾ ಬಂದ್, ಪ್ರಜ್ವಲ್ ರೇವಣ್ಣ(Prajwal Revanna) ಬೇಟೆಗೆ ಸಿದ್ಧವಾಗಿದೆ ಏಳು ಸುತ್ತಿನ ಕೋಟೆ. ಮಾಜಿ ಸಚಿವ ಎಚ್.ಡಿ ರೇವಣ್ಣ(HD Revanna) ಮತ್ತು ಪುತ್ರ ಪ್ರಜ್ವಲ್ ರೇವಣ್ಣನ ಕಥೆ ಹೀಗೇ ಆಗಿದೆ. ಅಶ್ಲೀಲ್ ವೀಡಿಯೊಗಳನ್ನು ಜಗತ್ತಿನ ಮುಂದೆ ಬಿಚ್ಚಿಟ್ಟ ಮಗನ ಪೆನ್'ಡ್ರೈವ್ ಪುರಾಣ, ಸಂತ್ರಸ್ಥೆಯನ್ನು ಕಿಡ್ನಾಪ್ ಮಾಡಿದ ಆರೋಪದ ಮೇಲೆ ಅಪ್ಪನ ಬಂಧನ. ಶನಿವಾರ ಎಚ್.ಡಿ ರೇವಣ್ಣ ಅರೆಸ್ಟ್ ಆಗ್ತಾ ಇದ್ದಂತೆ, ಮತ್ತೊಂದು ಪ್ರಶ್ನೆ ಹುಟ್ಟಿಕೊಂಡಿತ್ತು. ಅಪ್ಪ ಅಂದರ್ ಆಗಿದ್ದಾಯ್ತು. ಮಗ ಯಾವಾಗ ಅಂತ. ಎಸ್ಐಟಿ ಬಲೆ ಬೀಸಿ ಕಾಯ್ತಾ ಇದ್ರೂ ಈ ಕ್ಷಣದವರೆಗೆ ಪ್ರಜ್ವಲ್ ರೇವಣ್ಣನ ಸುಳಿವೇ ಇಲ್ಲ. ಕಾರಣ, ಪೆನ್‌ಡ್ರೈವ್ ಪ್ರಕರಣದ ರೂವಾರಿ ಪ್ರಜ್ವಲ್ ರೇವಣ್ಣ ಈ ದೇಶದಲ್ಲೇ ಇಲ್ಲ.

ಇದನ್ನೂ ವೀಕ್ಷಿಸಿ: ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌! ರಾಹುಲ್‌ ಗಾಂಧಿ ವಿರುದ್ಧ ಏಕವಚನದಲ್ಲೇ ಕಿಡಿಕಾರಿದ ಹೆಚ್‌ಡಿಕೆ!

Related Video