ಶಿರಾ ಬೈ ಎಲೆಕ್ಷನ್: ಮತಗಟ್ಟೆ ಹೊರಗೆ ಅಕ್ಕಿ ಇಟ್ಟುಕೊಂಡು ಮತಯಾಚನೆ..!
ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗ ಇಂದು (ಮಂಗಳವಾರ) ಮತದಾನ ನಡೆದಿದೆ. ಆದ್ರೆ, ಮತಗಟ್ಟೆಯೊಂದರಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿ ತೋರಿಸಿ ಮತಯಾಚನೆ ಮಾಡಿರುವುದು ಬೆಳಕಿಗೆ ಬಂದಿದೆ.
ತುಮಕೂರು, (ನ.03): ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗ ಇಂದು (ಮಂಗಳವಾರ) ಮತದಾನ ನಡೆದಿದೆ. ಆರ್.ಆರ್.ನಗರ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರು ಕೇಸರಿ ಟೀ ಶರ್ಟ್ ಹಾಗೂ ಕೇಸರಿ ಮಾಸ್ಕ್ ಧರಿಸುವ ಮೂಲಕ ಮತದಾರರ ಮೇಲೆ ಪ್ರಭಾವ ಪ್ರಯತ್ನ ನಡೆದಿತ್ತು.
ಕೇಸರಿ ಬಟ್ಟೆ ಧರಿಸಿ ಮತಗಟ್ಟೆಗೆ ಬಂದ ಬಿಜೆಪಿ ಕಾರ್ಯಕರ್ತರಿಗೆ ಟಾಂಗ್ ನೀಡಿದ 'ಕೈ' ಬೆಂಬಲಿಗರು
ಮತ್ತೊಂದೆಡೆ ಶಿರಾದಲ್ಲಿ ಮತದಾರನ್ನು ಸೆಳೆಯಲು ಇಲ್ಲಿ ಎಂಥಾ ಪ್ಲಾನ್ ಮಾಡಿದ್ದಾರೆ ಅಂದ್ರೆ, ಮತಗಟ್ಟೆಯೊಂದರಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿ ತೋರಿಸಿ ಮತಯಾಚನೆ ಮಾಡಿರುವುದು ಬೆಳಕಿಗೆ ಬಂದಿದೆ.