Asianet Suvarna News Asianet Suvarna News

ಕೇಸರಿ ಬಟ್ಟೆ ಧರಿಸಿ ಮತಗಟ್ಟೆಗೆ ಬಂದ ಬಿಜೆಪಿ ಕಾರ್ಯಕರ್ತರಿಗೆ ಟಾಂಗ್ ನೀಡಿದ 'ಕೈ' ಬೆಂಬಲಿಗರು

ಕೇಸರಿ ಬಟ್ಟೆ ಧರಿಸುವ ಮೂಲಕ ಮತದಾರರ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರ ವಿರುದ್ಧ ಕಾಂಗ್ರೆಸ್ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ನಾಗರಬಾವಿ ಮತಗಟ್ಟೆ ಬಳಿ ಈ ಪ್ರತಿಭಟನೆ ನಡೆದಿದೆ. 

ಬೆಂಗಳೂರು (ನ. 03): ಕೇಸರಿ ಬಟ್ಟೆ ಧರಿಸುವ ಮೂಲಕ ಮತದಾರರ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರ ವಿರುದ್ಧ ಕಾಂಗ್ರೆಸ್ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ನಾಗರಬಾವಿ ಮತಗಟ್ಟೆ ಬಳಿ ಈ ಪ್ರತಿಭಟನೆ ನಡೆದಿದೆ. ಪೊಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಯಾಗಿದೆ. 

ಮಾಜಿ ಕಾರ್ಪೋರೇಟರ್ ಜಿಕೆ ವೆಂಕಟೇಶ್ ಮನೆ ಮುಂದೆ ಜನವೋ ಜನ, ಸಾಮಾಜಿಕ ಅಂತರ ಮರೆತ ಬೆಂಬಲಿಗರು

ಬಿಜೆಪಿ ಕಾರ್ಯಕರ್ತರು ಕೇಸರಿ ಶರ್ಟ್ ಹಾಕಿಕೊಂಡು ಬಂದಿದ್ದರೆ, ಅವರಿಗೆ ಟಾಂಗ್ ಕೊಡಲು ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಚಿಹ್ನೆಯಲ್ಲಿರುವ 3 ಬಣ್ಣದ ಶಾಲನ್ನು ಹಾಕಿಕೊಂಡು ಬಂದಿದ್ದಾರೆ. ಬಟ್ಟೆ ಯಾವ ಬಣ್ಣದ್ದಾದರೂ ಸಮಸ್ಯೆ ಇಲ್ಲ. ಅಭ್ಯರ್ಥಿಯ ಭಾವಚಿತ್ರ, ಪಕ್ಷದ ಚಿಹ್ನೆ ಇರಬಾರದು ಎಂಬ ನಿಯಮವಿದೆ. ಹೀಗಾಗಿ ಯಾರೂ ಮಾತನಾಡುವ ಹಾಗಿಲ್ಲ. 

Video Top Stories