Asianet Suvarna News Asianet Suvarna News

ಅಕ್ಕಿ ಬದಲು ಖಾತೆಗೆ ಹಣ, ಕಾಂಗ್ರೆಸ್ ನಡೆ ಪ್ರಶ್ನಿಸಿದ ಬಿಜೆಪಿ ಬಣ!

ಅಕ್ಕಿ ಬದಲು ಹಣ ಹಾಕುವ ಸಿದ್ದರಾಮಯ್ಯ ಲೆಕ್ಕದಲ್ಲಿದೆ ಭಾರಿ ತಂತ್ರ,  ಬಿಜೆಪಿ ಟೀಕೆ ಮಾಡಲು ಯಾವುದೇ ನೈತಿಕತೆ ಉಳಿದಿಲ್ಲ, ವಿಪಕ್ಷ ನಾಯಕನ ಆಯ್ಕೆಗೆ ಜುಲೈ 2ರಂದು ಮುಹೂರ್ತ ಫಿಕ್ಸ್, ಶ್ರಮ ಒಬ್ಬರದ್ದು, ಅನುಭವಿಸುವವರ ಮತ್ತೊಬ್ಬರು, ಡಿಕೆಶಿ ಹೇಳಿಕೆ ವೈರಲ್ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

First Published Jun 29, 2023, 11:24 PM IST | Last Updated Jun 29, 2023, 11:24 PM IST

ರಾಜ್ಯದಲ್ಲಿ ಅಕ್ಕಿ ರಾಜಕೀಯ ಜೋರಾಗಿದೆ. ಉಚಿತ 5 ಕೆಜಿ ಅಕ್ಕಿ ನೀಡುವ ಕಾಂಗ್ರೆಸ್ ಸರ್ಕಾರ ಕೊನೆಗೂ ಸೂತ್ರವೊಂದನ್ನು ಮುಂದಿಟ್ಟಿದೆ. ಅಕ್ಕಿ ಬದಲು ಖಾತೆಗೆ ಹಣ ಹಾಕುವ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದೆ. ಆದರೆ ಕಾಂಗ್ರೆಸ್ ಈ ನಡೆಯನ್ನು ಬಿಜೆಪಿ ಪ್ರಶ್ನಿಸಿದೆ. ಮಾರುಕಟ್ಟೆಯಲ್ಲಿರುವ ಬೆಲೆ ನೀಡಿ. ಇಷ್ಟೇ ಕಾಂಗ್ರೆಸ್ 10 ಕೆಜಿ ಉಚಿತ ಅಕ್ಕಿ ಘೋಷಣೆ ಮಾಡಿದೆ. ಹೀಗಾಗಿ 10 ಕೆಜಿಯ ಮಾರುಕಟ್ಟೆ ಬೆಲೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಅಕ್ಕಿ ಇಲ್ಲದ ಕಾರಣ ನಾವು ಹಣಕೊಡುತ್ತಿದ್ದೇವೆ. ಅಕ್ಕಿ ಕೊಡದಿದ್ದರೆ ಹಣ ಕೊಡಿ ಎಂದು ಬಿಜೆಪಿ ಹೇಳಿತ್ತು. ಇದೀಗ ನಾವು ಹಣ ಕೊಡುತ್ತೇವೆ ಎಂದಾಗ ಟೀಕೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹರಿಹಾಯ್ದಿದ್ದಾರೆ. 
 

Video Top Stories