ಸಾಮಾಜಿಕ ಅಂತರದ ಪಾಠ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ...!
ಕೊರೋನಾ ಸೊಂಕಿನ ಭಯ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಾಮಾಜಿಕ ಅಂತರದ ಪಾಠ ಮಾಡಿರುವ ಪ್ರಸಂಗ ನಡೆದಿದೆ.
ಮೈಸೂರು, (ನ.04) : ನನ್ನಿಂದ ದೂರ ಇರಿ, 6 ಅಡಿ ದೂರ ನಿಂತುಕೊಳ್ಳಿ, ಇದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಜೊತೆಗೆ ಇದ್ದ ಕಾರ್ಯಕರ್ತರಿಗೆ ಪಾಠ ಮಾಡಿದ ರೀತಿ.
'ಬೈ ಎಲೆಕ್ಷನ್ ರಿಸಲ್ಟ್ ನಂತ್ರ ಸಿಎಂ ಬದಲಾವಣೆ, ದೆಹಲಿ ಮಾಹಿತಿ ಆಧಾರದ ಮೇಲೆ ಹೇಳ್ತಿದ್ದೇನೆ'
ಇಂದು (ಬುಧವಾರ) ಮೈಸೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಲು ಮುಂದಾದ ವೇಳೆಯಲ್ಲಿ ತಮ್ಮ ಹತ್ತಿರ ಬರುತ್ತಿದ್ದ ತಮ್ಮ ಕಾರ್ಯಕರ್ತರಿಗೆ ಈ ಮಾತು ಹೇಳಿದರು.