ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಖಚಿತ, ನಾನು ಜನರ ನಾಡಿಮಿಡಿತ ಅರ್ಥ ಮಾಡಿಕೊಂಡಿರುವುದು ಸರಿಯಿದೆ: ಸಿದ್ದರಾಮಯ್ಯ

ಕಾಂಗ್ರೆಸ್‌ಗೆ 130 ರಿಂದ 150 ಸೀಟ್‌ ಬರುತ್ತೆ ಅಂತಾ ಹೇಳಿದ್ದೆ
ಬಜರಂಗದಳ ಬ್ಯಾನ್‌ ಮಾಡ್ತೀವಿ ಎಂದು ನಾವು ಹೇಳಿಲ್ಲ
ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ

Share this Video
  • FB
  • Linkdin
  • Whatsapp

ಮೈಸೂರು: ಬುಧವಾರ ರಾಜ್ಯಾದ್ಯಂತ ಮತದಾನ ನಡೆದಿದ್ದು, ಚುನಾವಣೋತ್ತರ ಸಮೀಕ್ಷೆಗಳು ಸಹ ಹೊರಬಂದಿವೆ. ಈ ಸಮೀಕ್ಷೆಗಳ ಬಗ್ಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತೆ ಎಂದು ಈ ಹಿಂದೆಯೇ ನಾನು ಹೇಳಿದ್ದೆ. ನಮ್ಮ ಪಕ್ಷಕ್ಕೆ 130 ರಿಂದ 150 ಸೀಟ್‌ ಬರುತ್ತೆ ಅಂದಿದ್ದೆ. ಅಲ್ಲದೇ ವರುಣಾದಲ್ಲಿ ನಾನು ಗೆದ್ದೇ ಗೆಲ್ಲುತ್ತೇನೆ. ನಾನು ಜನರ ನಾಡಿಮಿಡಿತ ಅರ್ಥ ಮಾಡಿಕೊಂಡಿರುವುದು ಸರಿಯಾಗಿದೆಂದು ನನಗೆ ಅನಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಇದೆ ವೇಳೆ ಬಜರಂಗದಳ ಬ್ಯಾನ್‌ ವಿಚಾರವಾಗಿ ಅವರು ಮಾತನಾಡಿ, ನಾವು ಅದನ್ನು ಬ್ಯಾನ್‌ ಮಾಡುತ್ತೇವೆ ಎಂದು ಹೇಳಿಲ್ಲ. ಆದ್ರೆ ಬಿಜೆಪಿಯವರು ಈ ಬಗ್ಗೆ ಅಪಪ್ರಚಾರ ಮಾಡಿದ್ರು. ಹೀಗಿದ್ರೂ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂದು ಸಿದ್ದರಾಮಯ್ಯ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ವೀಕ್ಷಿಸಿ: EXIT POLL 100% ಕರೆಕ್ಟ್‌ ಆಗಿರುವುದಿಲ್ಲ, ಬಿಜೆಪಿಗೆ ಬಹುಮತ ದೊರೆಯುತ್ತದೆ: ಸಿಎಂ ಬೊಮ್ಮಾಯಿ

Related Video