ಸಿದ್ದರಾಮಯ್ಯ ಇನ್ನೂ 10 ವರ್ಷ ಆಡಳಿತ ನಡೆಸಲಿ: ಸಿಎಂಗೆ ಹಾರೈಸಿದ ಅಜ್ಜಿ ನಿಂಗವ್ವ

ಹಣವಿಲ್ಲದವರಿಗೆ ಶಕ್ತಿ ಯೋಜನೆಯಿಂದ ತುಂಬಾ ಸಹಾಯವಾಗಿದೆ. ಸಿದ್ದರಾಮಯ್ಯ ಅವರು ಇನ್ನೂ 10 ವರ್ಷ ಆಡಳಿತ ನಡೆಸಲಿ ಎಂದು ನಿಂಗವ್ವ ಹೇಳಿದ್ದಾರೆ.
 

Share this Video
  • FB
  • Linkdin
  • Whatsapp

ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆ ಬಸ್‌ ಹತ್ತುವಾಗ ಧಾರವಾಡದಲ್ಲಿ ಅಜ್ಜಿಯೊಬ್ಬರು ಬಸ್‌ಗೆ ಶಿರಬಾಗಿ ನಮಸ್ಕರಿಸಿದ್ದಾರೆ. ಈ ಫೋಟೋವನ್ನು ಸಿಎಂ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ. ಅಲ್ಲದೇ ಈ ಬಗ್ಗೆ ಅಜ್ಜಿ ನಿಂಗವ್ವ ಮಾತನಾಡಿದ್ದು, ನನಗೆ ಖುಷಿಯಾಗಿತ್ತು. ಹಾಗಾಗಿ ನಾನು ಹಾಗೆ ಮಾಡಿದೆ. ಮಹಿಳೆಯರಿಗೆ ಈ ಯೋಜನೆ ಕೊಟ್ಟಿದ್ದು, ತುಂಬಾ ಒಳ್ಳೆಯದಾಗಿದೆ. ನಾನು ಎಲ್ಲಿಗಾದ್ರು ಹೋಗಬೇಕಾದ್ರೆ ಮಕ್ಕಳ ಹತ್ತಿರ ಹಣ ಕೇಳಬೇಕಿತ್ತು. ನಮ್ಮ ಸಿದ್ದರಾಮಯ್ಯ ಅವರು ಇನ್ನೂ 10 ವರ್ಷ ಆಡಳಿತ ನಡೆಸಲಿದೆ. ಅವರು ತುಂಬಾ ಒಳ್ಳೆ ಕೆಲಸ ಮಾಡಿದ್ದಾರೆ. ಉಡುಪಿಗೆ ಹೋಗಬೇಕು ಎಂಬ ಆಸೆ ಇದೆ. ಮುಂದೆ ಅಲ್ಲಿಗೂ ಹೋಗುವೆ ಎಂದು ನಿಂಗವ್ವ ಹೇಳಿದ್ದಾರೆ. 

ಇದನ್ನೂ ವೀಕ್ಷಿಸಿ: ಶಿರಬಾಗಿ ನಮಸ್ಕರಿಸಿ ಬಸ್‌ ಹತ್ತಿದ ಅಜ್ಜಿ: ಬಹುಕಾಲ ನೆನಪಿನಲ್ಲಿ ಉಳಿಯುವಂತ ಫೋಟೋ ಎಂದ ಸಿಎಂ

Related Video