Asianet Suvarna News Asianet Suvarna News

Siddaramaiah: ಮುಸ್ಲಿಮರಿಗೆ ಹಿಂದುಳಿದ ವರ್ಗದ ಮೀಸಲು ನೀಡಿರುವುದು ನೂರಕ್ಕೆ ನೂರು ಸುಳ್ಳು: ಸಿಎಂ ಸಿದ್ದರಾಮಯ್ಯ

ಮುಸ್ಲಿಮರಿಗೆ ಹಿಂದುಳಿದ ವರ್ಗದ ಮೀಸಲು ನೀಡಲಾಗಿದೆ ಎಂಬ ಬಿಜೆಪಿಯ ಜಾಹೀರಾತು ಸುಳ್ಳು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
 

ಮುಸ್ಲಿಮರಿಗೆ ಹಿಂದುಳಿದ ವರ್ಗದ ಮೀಸಲು(Backward class reservation) ನೀಡಲಾಗಿದೆ ಎಂದ ಬಿಜೆಪಿ(BJP) ಗಂಭೀರ ಆರೋಪ ಮಾಡಿದೆ ಇದನ್ನು ಸಿಎಂ ಸಿದ್ದರಾಮಯ್ಯ(Siddaramaiah) ನಿರಾಕರಿಸಿದ್ದಾರೆ. ಬಿಜೆಪಿ ನೀಡಿರುವ ಜಾಹೀರಾತು(Advertisement) ನೂರಕ್ಕೆ ನೂರು ಸುಳ್ಳಾಗಿದೆ. ಬಿಜೆಪಿಯವರು ರಾಜಕಾರಣಕ್ಕೋಸ್ಕರ ಮಾಡುತ್ತಿರುವ ಆರೋಪ ಇದಾಗಿದೆ ಎಂದು ಸಿಎಂ ಹೇಳಿದ್ದಾರೆ. ಮತ ಧೃವೀಕರಣಕ್ಕಾಗಿ ಈ ರೀತಿ ಆರೋಪ ಮಾಡುತ್ತಿದ್ದಾರೆ. ದೇಶದ ಪ್ರಧಾನಿಯಾಗಿ ಈ ರೀತಿ ಹೇಳಿಕೆ ಕೊಡೋದು ಭೂಷಣ ಅಲ್ಲ. ಮೋದಿ ಹತಾಷರಾಗಿ ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಬಿಜೆಪಿಯವರ ಈ ರೀತಿಯ ವರ್ತನೆಯನ್ನು ನಾನು ಖಂಡಿಸುತ್ತೇನೆ. ಜನರಿಗೆ ತಪ್ಪು ಮಾಹಿತಿ ಕೊಡುತ್ತಿರುವುದು ತಪ್ಪು. ಈ ಬಗ್ಗೆ ಪಕ್ಷದಿಂದ ಚುನಾವಣಾ ಆಯೋಗಕ್ಕೆ ದೂರು ಕೊಡಲು ಹೇಳಿದ್ದೇನೆ ಎಂದು ಸಿಎಂ ಹೇಳಿದರು.

ಇದನ್ನೂ ವೀಕ್ಷಿಸಿ:  Joshi on Congress: 4 ಪರ್ಸೆಂಟ್ ಮುಸ್ಲಿಮರನ್ನು ಒಬಿಸಿಗೆ ಸೇರಿಸಲು ಕಾಂಗ್ರೆಸ್‌ ಹೊರಟಿದೆ: ಪ್ರಲ್ಹಾದ್ ಜೋಶಿ

Video Top Stories