Asianet Suvarna News Asianet Suvarna News

'ನಿಮ್ಮ ನಾಯಕರ ಎದೆಯಳತೆಯ ಮುಂದೆ ಮಣಿಯಬೇಡಿ ಸಿಎಂ ಸಾಹೇಬ್ರೆ, ಧೈರ್ಯದಿಂದ ಕೇಳಿ'

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು, ನೆರೆ, ಅತಿವೃಷ್ಟಿಯಿಂದಾದ ನಷ್ಟ ಪರಿಹಾರವನ್ನು ಕೇಳಲು ಸಿಎಂ ಯಡಿಯೂರಪ್ಪ ದೆಹಲಿಗೆ ದೌಡಾಯಿಸಿದ್ದಾರೆ. ಇದೇ ವೇಳೆ ಸಿಎಂ ಯಡಿಯೂರಪ್ಪ ದೆಹಲಿ ಭೇಟಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಕುಟುಕಿದ್ದಾರೆ. 

ಬೆಂಗಳೂರು (ಸೆ. 18): ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು, ನೆರೆ, ಅತಿವೃಷ್ಟಿಯಿಂದಾದ ನಷ್ಟ ಪರಿಹಾರವನ್ನು ಕೇಳಲು ಸಿಎಂ ಯಡಿಯೂರಪ್ಪ ದೆಹಲಿಗೆ ದೌಡಾಯಿಸಿದ್ದಾರೆ. ಇದೇ ವೇಳೆ ಸಿಎಂ ಯಡಿಯೂರಪ್ಪ ದೆಹಲಿ ಭೇಟಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಕುಟುಕಿದ್ದಾರೆ. 

ಸಂಪುಟ ಸರ್ಕಸ್: ಒಬ್ಬ ದಲಿತ ಸೇರಿ ನಾಲ್ವರಿಗೆ ಸಚಿವ ಸ್ಥಾನ; ಆದ್ರೆ ಕಂಡೀಶನ್ ಅಪ್ಲೈ!

'ಕಾಡಿ ಬೇಡಿ ಮೋದಿ ಭೇಟಿಗೆ ಅವಕಾಶ ಪಡೆದಿದ್ದೀರಿ. ಇದೊಂದು ಒಳ್ಳೆಯ ಸಂದರ್ಭ. ರಾಜ್ಯದ ಜಿಎಸ್‌ಟಿ ಪರಿಹಾರ ರೂ. 25, 508 ಕೋಟಿ ಕೇಳಿ. ಈ ಭೇಟಿಯಲ್ಲಿ ನಿಮ್ಮ ಕುರ್ಚಿ ಉಳಿಸಿಕೊಳ್ಳಲು ಕಸರತ್ತು ನಡೆಸಬೇಡಿ. ರಾಜ್ಯದ ಹಿತದೃಷ್ಟಿಯಿಂದ, ಜನರ ಒಳಿತಿಗಾಗಿ ಖಡಕ್ಕಾಗಿ ಕೇಳಿ. ರಾಜ್ಯದ ಜನ ನಿಮ್ಮೊಂದಿಗಿದ್ದಾರೆ ' ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.