ಸಂಪುಟ ಸರ್ಕಸ್: ಒಬ್ಬ ದಲಿತ ಸೇರಿ ನಾಲ್ವರಿಗೆ ಸಚಿವ ಸ್ಥಾನ; ಆದ್ರೆ ಕಂಡೀಶನ್ ಅಪ್ಲೈ!

ಸಿಎಂ ದೆಹಲಿ ಭೇಟಿ ಬೆನ್ನಲ್ಲೇ ಮಂತ್ರಿಗಿರಿ ಲಾಬಿ ಜೋರಾಗಿ ನಡೆಯುತ್ತಿದೆ. ಸಚಿವಾಕಾಂಕ್ಷಿಗಳು ಲಾಬಿಯಲ್ಲಿ ಬ್ಯುಸಿಯಾಗಿದ್ದಾರೆ. ಈ ಬಾರಿ 3 ಇಲ್ಲವೇ 4 ಮಂದಿಗೆ ಮಾತ್ರ ಮಂತ್ರಿ ಭಾಗ್ಯ ಒಲಿಯುವ ಸಾಧ್ಯತೆ ಇದೆ ಎಂದು ರಾಜಕೀಯ ಮೂಲಗಳು ಹೇಳುತ್ತಿವೆ. 

First Published Sep 18, 2020, 1:28 PM IST | Last Updated Sep 18, 2020, 1:32 PM IST

ಬೆಂಗಳೂರು (ಸೆ. 18): ಸಿಎಂ ದೆಹಲಿ ಭೇಟಿ ಬೆನ್ನಲ್ಲೇ ಮಂತ್ರಿಗಿರಿ ಲಾಬಿ ಜೋರಾಗಿ ನಡೆಯುತ್ತಿದೆ. ಸಚಿವಾಕಾಂಕ್ಷಿಗಳು ಲಾಬಿಯಲ್ಲಿ ಬ್ಯುಸಿಯಾಗಿದ್ದಾರೆ. ಈ ಬಾರಿ 3 ಇಲ್ಲವೇ 4 ಮಂದಿಗೆ ಮಾತ್ರ ಮಂತ್ರಿ ಭಾಗ್ಯ ಒಲಿಯುವ ಸಾಧ್ಯತೆ ಇದೆ ಎಂದು ರಾಜಕೀಯ ಮೂಲಗಳು ಹೇಳುತ್ತಿವೆ. ಯಾರಪ್ಪಾ ಅದು ಎಂದು ನೋಡುವುದಾದರೆ ಬಿಜೆಪಿ ಅಧಿಕಾರಕ್ಕೆ ಬರಲು ಸಹಾಯ ಮಾಡಿದವರಿಗೆ ಮಾತ್ರ ಮಣೆ ಹಾಕಲಾಗುತ್ತದೆ. ಈ ಲಿಸ್ಟ್‌ನಲ್ಲಿ ಆರ್‌ ಶಂಕರ್, ಎಂಟಿಬಿ ಸಚಿವ ಸ್ಥಾನ ಪಕ್ಕಾ ಎನ್ನಲಾಗುತ್ತಿದೆ. ಎಚ್‌ ವಿಶ್ವನಾಥ್‌ಗೆ ಪಕ್ಷದೊಳಗೆ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಮಂತ್ರಿಗಿರಿ ಸಿಗೋದು ಬಹುತೇಕ ಡೌಟು. 

ಸಿಎಂ ದೆಹಲಿ ಭೇಟಿ, ಜೋರಾಗಿದೆ ಮಂತ್ರಿಗಿರಿ ಲಾಬಿ; ಯಾರಿಗೆ ಪಟ್ಟ? ಯಾರಿಗೆ ಕೊಕ್?

ದಲಿತ ಸಮುದಾಯದ ಪ್ರಬಲ ನಾಯಕನಿಗೆ ಮಣೆ ಹಾಕಲು ಬಿಜೆಪಿ ಚಿಂತನೆ ನಡೆಸಿದೆ. 4 ನೇ ಭರ್ತಿಗೆ ಹೈಕಮಾಂಡ್ ಒಪ್ಪಿದರೆ ಲಿಂಗಾಯತ ಶಾಸಕರಿಗೆ ಅವಕಾಶ ನೀಡಲಾಗುತ್ತದೆ. ಈ ಬಾರಿಯ ಸಂಪುಟ ವಿಸ್ತರಣೆ ಬಹಳ ಇಂಟರೆಸ್ಟಿಂಗ್ ಆಗಿದೆ. ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ ನೋಡಿ..!