ನಾಯಿ ಮರಿ ಹೇಳಿಕೆಗೆ ತೇಪೆ ಹಚ್ಚಿದ ಸಿದ್ದು, ಸರ್ಕಾರಕ್ಕೆ ಮತ್ತೆ ಪಂಚಮಸಾಲಿ ಗುದ್ದು!

ಜೆಪಿ ನಡ್ಡಾ ಕರ್ನಾಟಕದಲ್ಲಿ, 6 ಮಠಗಳಿಗೆ ಭೇಟಿ, ಫೆಬ್ರವರಿ ಅಂತ್ಯದಲ್ಲಿ ಬೆಂಗಳೂರು ಮೈಸೂರು ಹೆದ್ದಾರಿ ಲೋಕಾರ್ಪಣೆ, ಮೈಸೂರು ಹೆದ್ದಾರಿಯಲ್ಲಿ ಹೆಸರಿನ ರಾಜಕೀಯ, ದೇವೇಗೌಡರ ಹೆಸರಿಗೆ ಒತ್ತಾಯ, ಪಂಚಮಸಾಲಿ ಸಮುದಾಯದ ಹೋರಾಟ ತೀವ್ರ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

Share this Video
  • FB
  • Linkdin
  • Whatsapp

ಸಿಎಂ ಬಸವರಾಜ್ ಬೊಮ್ಮಾಯಿಯನ್ನು ನಾಯಿ ಮರಿಗೆ ಹೋಲಿಸಿದ ಸಿದ್ದರಾಮಯ್ಯ ಇಂದು ಹೇಳಿಕೆಗೆ ತೇಪೆ ಹಚ್ಚುವ ಕಾರ್ಯ ಮಾಡಿದ್ದಾರೆ. ನಾನು ಧೈರ್ಯವಾಗಿ ಇರಬೇಕು, ಕೇಂದ್ರದಿಂದ ಬರಬೇಕಿರುವ ರಾಜ್ಯದ ಪಾಲನ್ನು ತರಬೇಕು, ನಾಯಿ ಮರಿ ರೀತಿ ಇರಬಾರದು ಎಂದಿದ್ದೇನೆ ಹೊರತು ಇನ್ನೇನು ಹೇಳಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇನ್ನು ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಬ್ರೇಕ್ ಹಾಕಲು ಸರ್ಕಾರ 2 ಹೊಸ ಪ್ರವರ್ಗ ಸೃಷ್ಟಿಸಿ ಘೋಷಣೆ ಮಾಡಿತ್ತು. ಸರ್ಕಾರದ ನಿರ್ಧಾರದ ಕುರಿತು ಪರಿಶೀಲನೆ ನಡೆಸಿದ ಪಂಚಮಸಾಲಿ ಸಮುದಾಯ ಸರ್ಕಾರದ ವಿರುದ್ಧ ಮುಗಿಬಿದ್ದಿದೆ. ಇತ್ತ ಯತ್ನಾಳ್ ಸರ್ಕಾರಕ್ಕೆ ಹೊಸ ಗಡುವು ನೀಡಿದ್ದಾರೆ. 

Related Video