'ಹಿಂದಿನ ಸರ್ಕಾರ ಬೀಳಿಸೋದ್ರಲ್ಲಿ ನಾನು ವಿಲನ್ ಅಲ್ಲ, ನನ್ನದೇನಿದ್ರೂ ಹೀರೋ ಪಾತ್ರ'

ಸಿದ್ದರಾಮಯ್ಯ ಡೈಲಾಗ್‌ಗಳು ಸಖತ್ ಪಂಚಿಂಗ್ ಆಗಿರುತ್ತದೆ. ಕಾಮಿಡಿಯೂ ಇರುತ್ತದೆ, ವ್ಯಂಗ್ಯವೂ ಇರುತ್ತದೆ.  ‘ನಾನು ಯಾವತ್ತೂ ಹೀರೋ... ವಿಲನ್‌ ಅಲ್ಲವೇ ಅಲ್ಲ...’ಎಂದು ಕಲಬುರ್ಗಿಯಲ್ಲಿ ಹೇಳಿದ್ದಾರೆ. 

First Published Oct 27, 2020, 10:41 AM IST | Last Updated Oct 27, 2020, 10:54 AM IST

ಬೆಂಗಳೂರು (ಅ. 27): ಸಿದ್ದರಾಮಯ್ಯ ಡೈಲಾಗ್‌ಗಳು ಸಖತ್ ಪಂಚಿಂಗ್ ಆಗಿರುತ್ತದೆ. ಕಾಮಿಡಿಯೂ ಇರುತ್ತದೆ, ವ್ಯಂಗ್ಯವೂ ಇರುತ್ತದೆ.  ‘ನಾನು ಯಾವತ್ತೂ ಹೀರೋ... ವಿಲನ್‌ ಅಲ್ಲವೇ ಅಲ್ಲ...’ಎಂದು ಕಲಬುರ್ಗಿಯಲ್ಲಿ ಹೇಳಿದ್ದಾರೆ. 

ಹಿಂದಿನ ಸರ್ಕಾರ ಬೀಳಿಸುವಲ್ಲಿ ಸಿದ್ದರಾಮಯ್ಯನವರ ಪಾತ್ರವಿದೆ ಎಂಬ ಕುಮಾರಸ್ವಾಮಿ ಹೇಳಿಗೆ ತಿರುಗೇಟು ನೀಡಿದ ಅವರು, 'ಸುಮ್ಮಸುಮ್ಮನೆ ಯಾರನ್ನೂ ತಾವು ಕೆಣಕೋದಿಲ್ಲ. ನನ್ನ ಮೇಲೆ ಟೀಕೆ ಮಾಡಿದ್ದಕ್ಕೆ ನಾನು ಉತ್ತರಿಸಿದ್ದೇನೆ. ನನ್ನ ಟೀಕೆಯಿಂದ ಅವರಿಗೆ ಮುಜುಗರವಾಗಿದ್ದರೆ ನಾನೇನು ಮಾಡಲಿ? ಸಿದ್ದರಾಮಯ್ಯ ಸರ್ಕಾರ ಬೀಳಿಸಿದರು ಅಂತಾರೆ, ಕುಣಿಯಲು ಬಾರದವರಿಗೆ ನೆಲ ಡೊಂಕು ಎಂಬಂತಿದೆ ಈ ಮಾತು' ಎಂದು ಸಿದ್ದರಾಮಯ್ಯ ಹೇಳಿದರು.

'RR ನಗರದಲ್ಲಿ ಅಭಿವೃದ್ಧಿಯಾಗಿದ್ದು ಜನರದ್ದಾ? ಗೆದ್ದು ಹೋದವರದ್ದಾ?

ಶಾಸಕರ ಕಷ್ಟ-ಸುಖ ಆಲಿಸಿ ಅವರ ವಿಶ್ವಾಸ ಗಳಿಸಬೇಕಿರುವುದು ಸಿಎಂ ಕೆಲಸ ಅಲ್ಲವೇ? ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ಕುಳಿತು ಆಡಳಿತ ನಡೆಸಿದರೆ ಇದು ಸಾಧ್ಯವೇ? ಇದನ್ನೇ ನಾನು ಹೇಳಿದ್ದಕ್ಕೆ ವಿಲನ್‌ ಅಂತಾರೆ, ನಾನು ಯಾವತ್ತಿಗೂ ವಿಲನ್‌ ಅಲ್ಲವೇ ಅಲ್ಲ, ನನ್ನದೇನಿದ್ದರೂ ಹೀರೋ ಪಾತ್ರ, ನನ್ನ ಬಗ್ಗೆ ಜನ ಏನಂತಾರೆ ನೀವೇ ಕೇಳಿ ಎಂದು ಟಾಂಗ್ ನೀಡಿದ್ದಾರೆ.