Asianet Suvarna News Asianet Suvarna News

ಮೋದಿ 2 ಕಡೆ ನಿಂತ್ರೆ ಲೀಡರ್, ನಾನು ನಿಂತ್ರೆ ಆಗಲ್ವಾ? ಸಿದ್ದರಾಮಯ್ಯ ಗೂಗ್ಲಿ!

 ನಾಳೆ ಕಲಬುರಗಿ, ಯಾದಗಿರಿಯಲ್ಲಿ ಮೋದಿ ಕಾರ್ಯಕ್ರಮ, ಮೋದಿ ಸ್ವಾಗತಕ್ಕೆ ಸಜ್ಜಾಗಿದೆ ಕಲ್ಯಾಣ ಕರ್ನಾಟಕ, ಬಿಜೆಪಿ ಯುವ ಮೋರ್ಚಾದಿಂದ 5 ಟಿಕೆಟ್ ಬೇಡಿಕೆ, ವೇಶ್ಯೆ ಹೇಳಿಕೆಗೆ ಕ್ಷಮೆಯಾಚಿಸಿದ ಬಿಕೆ ಹರಿಪ್ರಸಾದ್ ಸೇರಿದಂತೆ ಇಂದಿನ ಇಡೀ ದಿನದ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

ಪ್ರಧಾನಿ ನರೇಂದ್ರ ಮೋದಿ ಎರಡು ಕಡೆ ನಿಂತರೆ ಅವರು ಉತ್ತಮ ಲೀಡರ್, ಸಿದ್ದರಾಮಯ್ಯ ಎರಡು ಕಡೆ ನಿಲ್ಲಂಗಿಲ್ಲ. ಇವೆಲ್ಲಾ ನಡೆಯಲ್ಲ. ಮೋದಿ ಗುಜರಾತ್ ಹಾಗೂ ವಾರಣಾಸಿಯಿಂದ ಸ್ಪರ್ಧಿಸಿದ್ದಾರೆ. ಅವರು ಮಾತ್ರ ಉತ್ತಮ ಲೀಡರ್ ಆಗೋದು ಹೇಗೆ? ಎಂದು ಸಿದ್ದಾರಾಮಯ್ಯ ಪ್ರಶ್ನಿಸಿದ್ದಾರೆ.  ಜನ ತೀರ್ಪು ನೀಡುತ್ತಾರೆ. ಸೋಲು ಗೆಲುವು ಇದ್ದೆ ಇದೆ. ಕೊಪ್ಪಳದಲ್ಲಿ ನಿಂತೂ ಸೋತಿದ್ದೇನೆ. ಚಾಮುಂಡೇಶ್ವರಿಲ್ಲೇ ಸ್ಪರ್ಧೆ ಮಾಡುತ್ತಿದ್ದೆ. ಆದರೆ ನನ್ನ ಹುಟ್ಟೂರು ವರುಣಾ  ಕ್ಷೇತ್ರಕ್ಕೆ ವಿಂಗಡನೆಯಾದಾಗ ವರುಣಾ ಕ್ಷೇತ್ರದಿಂದ ಸ್ಪರ್ಧಿಸಿದ್ದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇಷ್ಟೇ ಅಲ್ಲ ನಾನು ಈ ಬಾರಿ ಎರಡು ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿಲ್ಲ ಎಂದಿದ್ದಾರೆ.