ಸ್ಯಾಂಟ್ರೋ ರವಿ ಕೇಸ್‌ ಮುಚ್ಚಿ ಹಾಕುವ ಒಳಸಂಚು: ಸಿದ್ದರಾಮಯ್ಯ ಆರೋಪ

ಸ್ಯಾಂಟ್ರೋ ರವಿ ನ್ಯಾಯಾಂಗ ಬಂಧನ ವಿಚಾರವಾಗಿ ಸರ್ಕಾರದ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
 

Share this Video
  • FB
  • Linkdin
  • Whatsapp

ಸ್ಯಾಂಟ್ರೋ ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಗುಡುಗಿದ್ದು, ಇದರ ಹಿಂದೆ ಏನೋ ಹುನ್ನಾರವಿದೆ ಎಂದು ಆರೋಪಿಸಿದ್ದಾರೆ. ಸ್ಯಾಂಟ್ರೊ ರವಿ ಒಬ್ಬ ನಟೋರಿಯಸ್‌ ಕ್ರಿಮಿನಲ್‌. ಯಾರನ್ನಾದ್ರು ಬಂಧಿಸಿದ್ರೆ ಕಸ್ಟಡಿಗೆ ತೆಗೆದುಕೊಳ್ತಾರೆ. ಕಸ್ಟಡಿಗೆ ಪಡೆದು ಪೊಲೀಸರು ವಿಚಾರಣೆ ನಡೆಸ್ತಾರೆ. ನಟೋರಿಯಸ್‌'ನನ್ನು ಯಾಕೆ ನ್ಯಾಯಾಂಗ ಬಂಧನಕ್ಕೆ ನೀಡಿದ್ರು. ಇದರ ಹಿಂದೆ ಹುನ್ನಾರವಿದೆ ಎಂದು ಅವರು ಆರೋಪಿಸಿದರು. ಏನೋ ವಿಷಯವನ್ನು ಮುಚ್ಚು ಹಾಕಲು ಪ್ರಯತ್ನಿಸುತ್ತಿದ್ದಾರೆ. ಈ ಕೇಸ್‌ ಬಗ್ಗೆ ಸರಿಯಾಗಿ ತನಿಖೆ ಆಗಬೇಕು‌ ಎಂದು ಒತ್ತಾಯಿಸಿದ್ದಾರೆ. ಇನ್ನು ಸ್ಯಾಂಟ್ರೋ ರವಿ ನ್ಯಾಯಾಂಗ ಬಂಧನ ಮುಂದುವರಿಕೆ ಆಗಿದ್ದು, ಜನವರಿ 25ರವರೆಗೆ ಸ್ಯಾಂಟ್ರೋ ರವಿಗೆ ಜೈಲೆ ಗತಿ ಆಗಲಿದೆ.

'ನಮೋ' ಬಂದ ಬಳಿಕ ಬದಲಾಯ್ತು ಸೇನೆಯ ಪ್ರತಾಪ: ಬತ್ತಳಿಕೆಯಲ್ಲಿವೆ ಪವರ್ ...

Related Video