Satta Bazar Prediction: ಲೋಕಸಮರದಲ್ಲಿ 400 ರ ಗಡಿ ದಾಟುತ್ತಾ NDA? ಸಟ್ಟಾ ಬಜಾರ್‌ ಅಚ್ಚರಿಯ ಭವಿಷ್ಯ!

ಸಟ್ಟಾಬಜಾರ್‌ನಲ್ಲಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಭರ್ಜರಿ ಬೆಟ್ಟಿಂಗ್‌ ನಡೆಯುತ್ತಿದ್ದು, ಮೋದಿ ಮತ್ತೊಮ್ಮೆ ಎಂದು ಇದು ಹೇಳುತ್ತಿದೆ.

Share this Video
  • FB
  • Linkdin
  • Whatsapp

ಫಲಿತಾಂಶದ ದಿನ ಹತ್ತಿರ ಬರುತ್ತಿದ್ದಂತೆಯೇ ಸಟ್ಟಾಬಜಾರ್‌ನ(Satta Bazar) ಬಿಸಿ ಕೂಡ ಏರುತ್ತಿದೆ. ಈ ಬಾರಿ ಕೇಂದ್ರದಲ್ಲಿ ಅಧಿಕಾರ ಗದ್ದುಗೆ ಹಿಡಿಯಲು ಎನ್‌ಡಿಎ(NDA)- ಇಂಡಿಯಾ ಮೈತ್ರಿಕೂಟ ನಡುವೆ ಭಾರೀ ಜಿದ್ದಾಜಿದ್ದಿ ಏರ್ಪಪಟ್ಟಿರುವ ಬೆನ್ನಲ್ಲೇ ಚುನಾವಣಾ(Lok Sabha Election 2024) ಫಲಿತಾಂಶಗಳ ನಿಖರ ಅಂದಾಜಿಗೆ ಹೆಸರುವಾಸಿಯಾಗಿರುವ ಫಲೋಡಿ ಸಟ್ಟಾಬಜಾರ್‌ ಅಚ್ಚರಿಯ ಭವಿಷ್ಯ ನುಡಿದಿದೆ. ಚುನಾವಣೆ ಘೋಷಣೆಯಾದಾಗ ಬಿಜೆಪಿ(BJP) 330 ಸ್ಥಾನದಲ್ಲಿತ್ತು ಎಂದು ಸಟ್ಟಾ ಬಜಾರ್ ಹೇಳಿತ್ತು. ಆದರೆ ಮೊದಲೆರಡು ಹಂತದ ಚುನಾವಣೆಯಲ್ಲಿ ಬಿಜೆಪಿ ಸಂಖ್ಯೆ ಗಣನೀಯ ಕುಸಿತ ಕಂಡಿತ್ತು. ಮೂರನೇ ಹಂತದ ಮತದಾನದ ಬಳಿಕ ಬಿಜೆಪಿ ಸಂಖ್ಯೆ 290 ರಿಂದ 295ಕ್ಕೆ ಸಟ್ಟಾ ಬಜಾರ್ ಇಳಿಸಿದೆ. ಇದೇ ವೇಳೆ ಕಾಂಗ್ರೆಸ್(Congress) 58 ರಿಂದ 62 ಸ್ಥಾನ ಗೆಲ್ಲಲಿದೆ ಎಂದು ಸಟ್ಟಾ ಬಜಾರ್ ಭವಿಷ್ಯ ನುಡಿದಿದೆ. 

ಇದನ್ನೂ ವೀಕ್ಷಿಸಿ:  Rachana Rai in Devil: ದರ್ಶನ್‌ರ 'ಡೆವಿಲ್'ಗೆ ಸಿಕ್ಕಳು ಸುಂದರಿ! ಯಾರೀ ಈ ತುಳು ನಾಡ ಕುವರಿ?

Related Video