
Satish Jarkiholi Row: 'ಕೈ' ಗೆ ತಿರುಗುಬಾಣವಾಯ್ತು ಸತೀಶ್ ಜಾರಕಿಹೊಳಿ ಹೊತ್ತಿಸಿದ 'ಹಿಂದೂ' ಕಿಚ್ಚು
Satish Jarkiholi Hindu Word Row: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಡಿರೋ ಮಾತು ಈಗ ಕಾಂಗ್ರೆಸ್ ಪಾಲಿಗೆ ಬಿಸಿತುಪ್ಪವಾಗಿದೆ
ಬೆಂಗಳೂರು (ನ. 10): ಹಿಂದೂ ಅನ್ನೋ ಪದ ಅಶ್ಲೀಲ, ಹಿಂದೂ ಅನ್ನೋ ಪದ ನಮ್ಮ ದೇಶದ್ದೇ ಅಲ್ಲ, ಅದು ಪರ್ಷಿಯಾದಿಂದ ಬಂದ ಪದ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ಆಡಿರೋ ಈ ಮಾತು ಕಾಂಗ್ರೆಸ್ (Karnataka Congress) ಪಾಲಿಗೆ ಬಿಸಿತುಪ್ಪ. ಚುನಾವಣಾ ಹೊಸ್ತಿಲಲ್ಲಿ ಕೈ ಪಾಳೆಯಕ್ಕೆ ಅಪ್ಪಳಿಸಿರೋ ದೊಡ್ಡ ಬಿರುಗಾಳಿ. ಆ ಬಿರುಗಾಳಿಯ ಜೊತೆ ಮತ್ತೊಂದು ಬಾಣ ಕೈಕೋಟೆಯ ಮೇಲೆ ಅಪ್ಪಳಿಸಿ ಬಿಟ್ಟಿದೆ. ತಾನು ಆಡಿದ ಮಾತು ಸುಳ್ಳು ಅನ್ನೋದನ್ನು ಪ್ರೂವ್ ಮಾಡಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡ್ತೇನೆ. ಹೀಗಂತ ಸತೀಶ್ ಜಾರಕಿಹೊಳಿ ಸಡ್ಡು ಹೊಡೆದಿದ್ದಾರೆ. ಅಷ್ಟಕ್ಕೂ ಆ ಬಾಣ ಯಾವುದು? ಜಾರಕಿಹೊಳಿ ಹೊತ್ತಿಸಿದ ಕಿಡಿ ರಾಜ್ಯಾದ್ಯಂತ ಜ್ವಾಲಾಮುಖಿಯಾಗಿ ಸ್ಫೋಟಿಸಿದ್ದು ಹೇಗೆ? ಕಾಂಗ್ರೆಸ್ಸಿಗೆ ಅಪ್ಪಳಿಸಿರೋ ನೂಪುರ್ ಬಾಣ ಕೈ ಪಾಳೆಯಕ್ಕೆ ಮಾಡಲಿರೋ ಡ್ಯಾಮೇಜ್ ಎಂಥದ್ದು? ಇಲ್ಲಿದೆ ಡಿಟೇಲ್ಸ್