ಎಲೆಕ್ಷನ್‌ಗೆ ನಿಲ್ಲಲ್ವಾ ಸಿದ್ದು-ಡಿಕೆಶಿ?: ಸಂಚಲನ ಮೂಡಿಸಿದ 'ಲಾಡ್' ಮಾತು

ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದ್ದು, ಕಾಂಗ್ರೆಸ್ಸಿನಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಸ್ಪರ್ಧೆ ಬಗ್ಗೆ ಹೊಸ ಲೆಕ್ಕಾಚಾರ ಶುರುವಾಗಿದೆ‌.

Share this Video
  • FB
  • Linkdin
  • Whatsapp

ಕರ್ನಾಟಕ ವಿಧಾನಸಭಾ ಚುನಾವಣೆ ದಿನ ಹತ್ತಿರವಾಗುತ್ತಿದ್ದು, ಎಲ್ಲಾ ಪಕ್ಷಗಳ ನಾಯಕರು ತಮ್ಮ ಗೆಲುವಿಗೆ ಯೋಜನೆ ಮಾಡಿಕೊಳ್ತಾ ಇದ್ದಾರೆ. ಕೆಲವರು ತಾವು ಗೆಲ್ಲಬಲ್ಲ ಅತ್ಯಂತ ಸುರಕ್ಷಿತ ಕ್ಷೇತ್ರ ಯಾವ್ದು ಅನ್ನೋದ್ರ ಬಗ್ಗೆ ಸರ್ವೇ ಮಾಡಿಸಿಕೊಳ್ಳುತ್ತಾ ಇದ್ದಾರೆ. ಈ ನಡುವೆ ಸಂತೋಷ್ ಲಾಡ್ ಇಡೀ ರಾಜ್ಯವೇ ಚರ್ಚೆ ಮಾಡುವಂತಹ ಮಾತನ್ನು ಆಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ‌ ಶಿವಕುಮಾರ್ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆ‌ ಮಾಡುವುದು ಬೇಡ. ಅವರು ಚುನಾವಣಾ ಸಂದರ್ಭದಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕಾಗಿದೆ ಎಂದು ಕಾಂಗ್ರೆಸ್ ನಾಯಕ ಸಂತೋಷ ಲಾಡ್ ಹೇಳಿದ್ದಾರೆ. ಇದು ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಿನಾಕಿನಿ ಟ್ರಿಬ್ಯುನಲ್‌ ರಾಜ್ಯಕ್ಕೆ ಮರಣ ಶಾಸನ: ಎಚ್‌.ಡಿ.ಕುಮಾರಸ್ವಾಮಿ

Related Video