Asianet Suvarna News Asianet Suvarna News

ಸಿಎಂ ಬದಲಾವಣೆ, ಡಿಸಿಎಂ ಚರ್ಚೆ ಬಗ್ಗೆ ಮಾತನಾಡಲು ಮಾರ್ಕೆಟ್ ಇಲ್ಲ: ಸಿಎಂ ಪರ ಆರ್.ವಿ. ದೇಶಪಾಂಡೆ ಬ್ಯಾಟ್

ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಒಳ್ಳೆಯ ಆಡಳಿತ ನೀಡುತ್ತಿದ್ದಾರೆ. ಸಿಎಂ ಬದಲಾವಣೆ, ಡಿಸಿಎಂ ಚರ್ಚೆ ಬಗ್ಗೆ ಮಾತಾಡಲು ಮಾರ್ಕೆಟ್ ಇಲ್ಲ ಎಂದು ಮಾಜಿ ಸಚಿವ ಆರ್.ವಿ. ದೇಶಪಾಂಡೆ ಹೇಳಿದ್ದಾರೆ.

ರಾಜ್ಯದಲ್ಲಿ ಸಿಎಂ ಕುರ್ಚಿ ಕಾಳಗ ಜೋರಾಗಿದ್ದು, ಸಿದ್ದರಾಮಯ್ಯ(CM Siddaramaiah) ಬೆನ್ನಿಗೆ ಕಾಂಗ್ರೆಸ್ ಹಿರಿಯ ನಾಯಕ ನಿಂತಿದ್ದಾರೆ. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಆಗುವುದಿಲ್ಲ ಎಂದು ಹೇಳುವ ಮೂಲಕ ಸಿಎಂ ಪರ ಮಾಜಿ ಸಚಿವ ಆರ್.ವಿ. ದೇಶಪಾಂಡೆ (RV Deshpande) ಬ್ಯಾಟಿಂಗ್ ಮಾಡಿದ್ದಾರೆ. ಹೆಚ್ಚುವರಿ DCM ಕೇಳುವವರ ಮೇಲೆ ಹೈಕಮಾಂಡ್ ಕ್ರಮ ಆಗಲಿ. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಒಳ್ಳೆಯ ಆಡಳಿತ ನೀಡುತ್ತಿದ್ದಾರೆ. ಸಿಎಂ ಬದಲಾವಣೆ, ಡಿಸಿಎಂ ಚರ್ಚೆ ಬಗ್ಗೆ ಮಾತಾಡಲು ಮಾರ್ಕೆಟ್ ಇಲ್ಲ. ಹಾದಿ ಬೀದಿಯಲ್ಲಿ ಮಾತಾಡುವವರ ವಿರುದ್ಧ ಶಿಸ್ತಿನ ಕ್ರಮ ಆಗಲಿ. ನಾನು ಪಕ್ಷದ ಶಿಸ್ತಿನ ಸಿಪಾಯಿ, ಯುವ ಘಟಕದ ಅಧ್ಯಕ್ಷನಾಗಿ ಕೆಲಸ‌ ಮಾಡಿದ್ದೇನೆ. ಮಾಧ್ಯಮದವರ ಮುಂದೆ ವಿನಾಕಾರಣ ಹೇಳಿಕೆ ನೀಡುವುದು ಸರಿಯಲ್ಲ. ಮಾಧ್ಯಮಗಳ ಮುಂದೆ ಮಾತನಾಡುವವರು ಎಚ್ಚರಿಕೆಯಿಂದ ಇರಬೇಕು. ಅನಾವಶ್ಯಕ ಚರ್ಚೆ ಮಾಡಿ, ನಿಮ್ಮ ಪಕ್ಷವನ್ನು ನೀವೆ ಹಾಳು ಮಾಡಬೇಡಿ. ಜನರ ಕಲ್ಯಾಣಕ್ಕಾಗಿ ಚರ್ಚೆ ನಡೆಸಿ, ಡಿಸಿಎಂ ಸ್ಥಾನಕ್ಕಲ್ಲ ಎಂದು ವಾರ್ನಿಂಗ್ ನೀಡಿದ್ದಾರೆ.

ಇದನ್ನೂ ವೀಕ್ಷಿಸಿ:  ರೇಣುಕಾಸ್ವಾಮಿ ಕೊಲೆ ಪ್ರಕರಣ: ಆರೋಪಿ ರವಿಶಂಕರ್‌ ಜೈಲುಪಾಲು..ಪತ್ನಿ ಕವಿತಾ ಅಳಲು

Video Top Stories