Asianet Suvarna News Asianet Suvarna News

ನನ್ನ ವಿರುದ್ಧ ಆಯೋಗಕ್ಕೆ ಡಿಕೆಶಿ ದೂರು ನೀಡಿದರೆ ನಾನು ನೀಡುತ್ತೇನೆ: ಮುನಿರತ್ನ

'ಕೇಬಲ್ ನೆಟ್‌ವರ್ಕ್ ನನ್ನ ವೃತ್ತಿ. ಡಿಕೆಶಿಯವರದ್ದೂ ಕೇಬಲ್ ನೆಟ್‌ವರ್ಕ್ ಇದೆ. ಒಂದು ವೇಳೆ ಡಿಕೆಶಿ ಆಯೋಗಕ್ಕೆ ದೂರು ನೀಡಿದ್ರೆ ನಾನು ದೂರು ಕೊಡುತ್ತೇನೆ' ಎಂದು ಮುನಿರತ್ನ ಹೇಳಿದ್ದಾರೆ. 

Oct 26, 2020, 4:10 PM IST

ಬೆಂಗಳೂರು (ಅ. 26): RR ನಗರ ಚುನಾವಣಾ ಅಖಾಡದಲ್ಲಿ ಡಿಕೆ ಶಿವಕುಮಾರ್ ಹಾಗೂ ಮುನಿರತ್ನ ನಡುವೆ ವಾಕ್ಸಮರ ಜೋರಾಗಿದೆ. ಚುನಾವಣಾ ಭಾಷಣದಲ್ಲಿ ಇಬ್ಬರೂ ಒಬ್ಬರ ಮೇಲೊಬ್ಬರು ವಾಗ್ದಾಳಿ ನಡೆಸುತ್ತಿದ್ದಾರೆ. 

' ಡಿಕೆಶಿ ವಿರುದ್ಧ 100 ಕೇಸ್ ಕೊಡಲಿ, ಮುನಿರತ್ನ ವಿರುದ್ಧವೂ ನಾವು ದಾಖಲೆ ಬಿಡುಗಡೆ ಮಾಡುತ್ತೇವೆ'

'ಕೇಬಲ್ ನೆಟ್‌ವರ್ಕ್ ನನ್ನ ವೃತ್ತಿ. ಡಿಕೆಶಿಯವರದ್ದೂ ಕೇಬಲ್ ನೆಟ್‌ವರ್ಕ್ ಇದೆ. ಒಂದು ವೇಳೆ ಡಿಕೆಶಿ ಆಯೋಗಕ್ಕೆ ದೂರು ನೀಡಿದ್ರೆ ನಾನು ದೂರು ಕೊಡುತ್ತೇನೆ. ನನಗೆ ಅನ್ವಯಿಸುವ ಚುನಾವಣಾ ಸಂಹಿತೆ ಅವರಿಗೂ ಅನ್ವಯಿಸುತ್ತದೆ. ಇಬ್ಬರಿಗೂ ಒಂದೇ ಕಾನೂನು ಅನ್ವಯಿಸುತ್ತದೆ. ಮುಂದಕ್ಕೆ ಏನಾಗುತ್ತದೋ ನೋಡೋಣ. ದ್ವೇಷ, ಅಸೂಯೆಭರಿತ ರಾಜಕಾರಣಕ್ಕೆ ನಾನು ಉತ್ತರ ಕೊಡುವುದಿಲ್ಲ' ಎಂದು ಮುನಿರತ್ನ ಮಾಧ್ಯಮಗಳೆದುರು ಹೇಳಿದ್ದಾರೆ.