' ಡಿಕೆಶಿ ವಿರುದ್ಧ 100 ಕೇಸ್ ಕೊಡಲಿ, ಮುನಿರತ್ನ ವಿರುದ್ಧವೂ ನಾವು ದಾಖಲೆ ಬಿಡುಗಡೆ ಮಾಡುತ್ತೇವೆ'

'ಮತದಾರರನ್ನು ಭಯಭೀತಗೊಳಿಸುವುದು ಮುನಿರತ್ನ ಅವರ ಹವ್ಯಾಸ. ಈಗಲೂ ವೋಟರ್ ಐಡಿ ಕಲೆಕ್ಟ್ ಮಾಡಿ , ನೀವು ಕಾಂಗ್ರೆಸ್‌ಗೆ ವೋಟ್ ಹಾಕಿಲ್ಲ ಅಂದ್ರೆ ನಿಮಗೆ ಹಣ ಕೊಡುತ್ತೇವೆ ಎನ್ನುತ್ತಿದ್ದಾರೆ' ಎಂದು ಸಂಸದ ಡಿಕೆ ಸುರೇಶ್ ಆರೋಪಿಸಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಅ. 26): 'ಮತದಾರರನ್ನು ಭಯಭೀತಗೊಳಿಸುವುದು ಮುನಿರತ್ನ ಅವರ ಹವ್ಯಾಸ. ಈಗಲೂ ವೋಟರ್ ಐಡಿ ಕಲೆಕ್ಟ್ ಮಾಡಿ , ನೀವು ಕಾಂಗ್ರೆಸ್‌ಗೆ ವೋಟ್ ಹಾಕಿಲ್ಲ ಅಂದ್ರೆ ನಿಮಗೆ ಹಣ ಕೊಡುತ್ತೇವೆ ಎನ್ನುತ್ತಿದ್ದಾರೆ' ಎಂದು ಸಂಸದ ಡಿಕೆ ಸುರೇಶ್ ಆರೋಪಿಸಿದ್ದಾರೆ. 

ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಸಂದರ್ಶನ : ಡಿಕೆ ರವಿ ಬಗ್ಗೆ ಮನದ ಮಾತು..!

ಇನ್ನು ಡಿಕೆಶಿ ಬಗ್ಗೆ ಮಾಡುತ್ತಿರುವ ಆರೋಪಗಳಿಗೆ ಪ್ರತ್ಯುತ್ತರ ನೀಡಿದ್ದು, 'ಡಿಕೆಶಿ ವಿರುದ್ಧ 100 ಕೇಸ್ ಕೊಡಲಿ, ಮುನಿರತ್ನ ವಿರುದ್ಧವೂ ನಾವು ದಾಖಲೆ ಬಿಡುಗಡೆ ಮಾಡುತ್ತೇವೆ' ಎಂದು ಡಿಕೆ ಸುರೇಶ್ ವಾಗ್ದಾಳಿ ನಡೆಸಿದ್ಧಾರೆ. 

ಮತದಾರರು ಯಾರೂ ಕೂಡಾ ನಿಮ್ಮ ವೋಟರ್ ಐಡಿಯನ್ನು ಕೊಡಬೇಡಿ. ಮತದಾನ ಶ್ರೇಷ್ಟವಾದ ದಾನ. ನಿಮ್ಮ ವೋಟ್, ನಿಮ್ಮ ಕ್ಷೇತ್ರದ ಭವಿಷ್ಯವನ್ನು ನಿರ್ಧರಿಸುತ್ತದೆ. ಯಾರೂ ಕೂಡಾ ಆಮೀಷಗಳಿಗೆ ಬಲಿಯಾಗಬೇಡಿ. ನಿಮ್ಮ ವೋಟನ್ನು ನೀವು ಚಲಾಯಿಸಿ' ಎಂದು ಮತದಾರರಲ್ಲಿ ಡಿಕೆ ಸುರೇಶ್ ಮನವಿ ಮಾಡಿದ್ದಾರೆ. 

Related Video