RR ನಗರ ಉಪಕದನ: ಮುನಿರತ್ನ ವಿರುದ್ಧ ಅಚ್ಚರಿ ಅಭ್ಯರ್ಥಿ ನಿಲ್ಲಿಸಲು ಡಿಕೆಶಿ ಪ್ಲಾನ್

ರಾಜರಾಜೇಶ್ವರಿ ನಗರ ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಬಹಳ ಕುತೂಹಲ ಮೂಡಿದೆ. ಆರ್ ಆರ್‌ ನಗರವನ್ನು ಕೈ ವಶ ಮಾಡಿಕೊಳ್ಳಲು ಟ್ರಬಲ್ ಶೂಟರ್ ಡಿಕೆಶಿ ಪ್ಲಾನ್ ಮಾಡುತ್ತಿದ್ದಾರೆ. 

First Published Sep 30, 2020, 10:27 AM IST | Last Updated Sep 30, 2020, 10:35 AM IST

ಬೆಂಗಳೂರು (ಸೆ. 30): ರಾಜರಾಜೇಶ್ವರಿ ನಗರ ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಬಹಳ ಕುತೂಹಲ ಮೂಡಿದೆ. ಆರ್ ಆರ್‌ ನಗರವನ್ನು ಕೈ ವಶ ಮಾಡಿಕೊಳ್ಳಲು ಟ್ರಬಲ್ ಶೂಟರ್ ಡಿಕೆಶಿ ಪ್ಲಾನ್ ಮಾಡುತ್ತಿದ್ದಾರೆ.

ಶಿರಾ ಉಪಚುನಾವಣೆ ಜೆಡಿಎಸ್‌ಗೆ ಸವಾಲು; ನಡೆಯುತ್ತಿದೆ ಭಾರೀ ಕಸರತ್ತು

ಕೈ ಪಾಳಯಲ್ಲೀಗ ಅಭ್ಯರ್ಥಿಗಳ ಬಗ್ಗೆ ಚರ್ಚೆ ಶುರುವಾಗಿದೆ.  ಮಾಗಡಿ ಮಾಜಿ ಶಾಸಕ HC ಬಾಲಕೃಷ್ಣ, ರಿಯಲ್ ಎಸ್ಟೇಟ್ ಉದ್ಯಮಿ ರಾಜ್‌ಕುಮಾರ್,  ಜೊತೆಗೆ ಐಎಎಸ್ ಅಧಿಕಾರಿ ಡಿಕೆ ರವಿ ಪತ್ನಿ ಕುಸುಮಾ ಹೆಸರು ಕೂಡಾ ಕೇಳಿ ಬರುತ್ತಿದೆ.ಒಕ್ಕಲಿಗ ಸಮುದಾಯದವರು ಆರ್‌ ಆರ್‌ ನಗರ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿದ್ದು ನಿರ್ಣಾಯಕರಾಗಿದ್ದಾರೆ. ಕಳೆದ 2 ಬಾರಿ ಮುನಿರತ್ನ ಗೆಲುವು ಸಾಧಿಸಿರುವುದು ಕೂಡಾ ಇವರ ಬೆಂಬಲದಿಂದ. ಹಾಗಾಗಿ ಕಾಂಗ್ರೆಸ್ ಈ ಬಾರಿ ಒಕ್ಕಲಿಗ ಸಮುದಾಯದವರನ್ನು ಕಣಕ್ಕಿಳಿಸಲು ಲೆಕ್ಕಾಚಾರ ಹಾಕಿದೆ.