Asianet Suvarna News Asianet Suvarna News

ರಾಯಣ್ಣ V/S ಶಿವಾಜಿ: ಇಂಥಾ ರಾಜಕಾರಣ ಬೇಕಾ?

ಸಂಗೊಳ್ಳಿ ರಾಯಣ್ಣ ಆಗಿರಲಿ, ಶಿವಾಜಿ ಮಹಾರಾಜ್ ಆಗಿರಲಿ ಇಬ್ಬರ ತತ್ವ ಸಿದ್ಧಾಂತಗಳು ಬೇರೆಯಾಗಿರಲಿಲ್ಲ. ಇಬ್ಬರೂ ಕೂಡಾ ಸ್ವಾತಂತ್ರಕ್ಕಾಗಿ ಹೋರಾಡಿದವರು. ಈ ಭೂಮಿಯ ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತಿದ್ದಾರೆ. ಇಬ್ಬರ ಬಗ್ಗೆ ಈ ದೇಶದ ಪ್ರತಿಯೊಬ್ಬರಿಗೂ ಗೌರವವಿದೆ. ಆದರೆ ಕನ್ನಡ ನೆಲದಲ್ಲಿ ರಾಯಣ್ಣ ಪ್ರತಿಮೆ ಸ್ಥಾಪನೆ ಲಾಠಿ ಚಾರ್ಜ್‌ಗೆ ಕಾರಣವಾಗಬೇಕಿತ್ತಾ? ಕನ್ನಡಿಗರು V/S ಮರಾಠಿಗರ ಸಂಘರ್ಷ ಎನ್ನುವ ಸ್ವರೂಪ ಪಡೆದಿದ್ದು ಯಾಕೆ? ಈ ಎಲ್ಲಾ ವಿಚಾರಗಳ ಬಗ್ಗೆ ಗಣ್ಯರ ಚರ್ಚೆ. ಇಲ್ಲಿದೆ ನೋಡಿ..!

ಬೆಂಗಳೂರು (ಆ. 29): ಬೆಳಗಾವಿಯಲ್ಲಿ ರಾಯಣ್ಣ - ಶಿವಾಜಿ ಪ್ರತಿಮೆ ವಿವಾದ ಭಾರೀ ಸದ್ದು ಮಾಡುತ್ತಿದೆ. ಈ ಹೋರಾಟ ಕನ್ನಡಿಗರು V/S ಮರಾಠಿಗರು ಎಂಬ ಭಾವನೆಯನ್ನು ಹುಟ್ಟು ಹಾಕುತ್ತಿದೆ. ಆಗಸ್ಟ್‌ 15 ರಂದು ರಾಯಣ್ಣ ಪ್ರತಿಮೆಯನ್ನು ಸ್ಥಾಪಿಸಲು ಪೊಲೀಸರು ನಿರಾಕರಿಸಿದ್ದು ಇಷ್ಟು ದೊಡ್ಡ ಮಟ್ಟದ ಹೋರಾಟಕ್ಕೆ ಕಾರಣವಾಯಿತು. ಹಾಗಾಗಿ ಕನ್ನಡಪರ ಹೋರಾಟಗಾರರು ರಾತ್ರೋರಾತ್ರಿ ರಾಯಣ್ಣ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಇದನ್ನು ಖಂಡಿಸಿ ಮರಾಠಿಗರು ಪಕ್ಕದಲ್ಲೇ ಶಿವಾಜಿ ಪ್ರತಿಮೆ ಪ್ರತಿಷ್ಟಾಪನೆಗೆ ಮುಂದಾಗಿದ್ದಾರೆ. ಪೊಲೀಸರು ತಡೆದಿದ್ದರಿಂದ ದೊಡ್ಡ ಮಟ್ಟದಲ್ಲಿ ಗಲಾಟೆಯಾಗಿದೆ. 

ರಾಯಣ್ಣ ಪ್ರತಿಮೆ ಪ್ರತಿಷ್ಠಾಪಿಸಿದ ಕನ್ನಡ ಹೋರಾಟಗಾರರ ವಿರುದ್ಧ ಪ್ರಕರಣ ದಾಖಲು!

ಸಂಗೊಳ್ಳಿ ರಾಯಣ್ಣ ಆಗಿರಲಿ, ಶಿವಾಜಿ ಮಹಾರಾಜ್ ಆಗಿರಲಿ ಇಬ್ಬರ ತತ್ವ ಸಿದ್ಧಾಂತಗಳು ಬೇರೆಯಾಗಿರಲಿಲ್ಲ. ಇಬ್ಬರೂ ಕೂಡಾ ಸ್ವಾತಂತ್ರಕ್ಕಾಗಿ ಹೋರಾಡಿದವರು. ಈ ಭೂಮಿಯ ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತಿದ್ದಾರೆ. ಇಬ್ಬರ ಬಗ್ಗೆ ಈ ದೇಶದ ಪ್ರತಿಯೊಬ್ಬರಿಗೂ ಗೌರವವಿದೆ. ಆದರೆ ಕನ್ನಡ ನೆಲದಲ್ಲಿ ರಾಯಣ್ಣ ಪ್ರತಿಮೆ ಸ್ಥಾಪನೆ ಲಾಠಿ ಚಾರ್ಜ್‌ಗೆ ಕಾರಣವಾಗಬೇಕಿತ್ತಾ? ಕನ್ನಡಿಗರು V/S ಮರಾಠಿಗರ ಸಂಘರ್ಷ ಎನ್ನುವ ಸ್ವರೂಪ ಪಡೆದಿದ್ದು ಯಾಕೆ? ಈ ಎಲ್ಲಾ ವಿಚಾರಗಳ ಬಗ್ಗೆ ಗಣ್ಯರ ಚರ್ಚೆ. ಇಲ್ಲಿದೆ ನೋಡಿ..!

Video Top Stories