Robert Vadra: ರಾಜಕಾರಣಕ್ಕೆ ಎಂಟ್ರಿ ಕೊಡ್ತಾರಾ ಸೋನಿಯಾ ಅಳಿಯ ? ಅಮೇಥಿಯಿಂದ ಸ್ಪರ್ಧೆ ಮಾಡ್ತಾರಾ ರಾಬರ್ಟ್ ವಾದ್ರಾ..?

ಸ್ಮೃತಿ ಇರಾನಿ ವಿರುದ್ಧ ಸ್ಪರ್ಧೆ ಮಾಡಲು ವಾದ್ರಾ ಉತ್ಸುಕ!
ಅಮೇಥಿಯಿಂದ ವಾದ್ರಾ ಸ್ಪರ್ಧೆ ಮಾಡೋದು ಪಕ್ಕಾನಾ?
ರಾಬರ್ಟ್ ವಾದ್ರಾ ಅವರೇ ಕೊಟ್ಟಿದ್ದಾರೆ ಸ್ಪರ್ಧೆಯ ಸುಳಿವು

First Published Apr 5, 2024, 10:27 AM IST | Last Updated Apr 5, 2024, 10:28 AM IST

ರಾಜಕಾರಣಕ್ಕೆ ಗಾಂಧಿ ಕುಟುಂಬದ ಮತ್ತೊಬ್ರು ಎಂಟ್ರಿ ಕೊಡ್ತಿದ್ದಾರೆ. ಸೋನಿಯಾ ಗಾಂಧಿ(Sonia Gandhi) ಅಳಿಯ ರಾಬರ್ಟ್ ವಾದ್ರಾ ಅಮೇಥಿಯಿಂದ(Amethi) ಸ್ಪರ್ಧೆ ಮಾಡ್ತಾರಾ ಎಂಬ ಚರ್ಚೆ ಶುರುವಾಗಿದೆ. ನಾನು ಸ್ಪರ್ಧಿಸಲಿ ಅಂತಾ ಅಮೇಥಿ ಜನ ಬಯಕೆ ಅಂತಾ ವಾದ್ರಾ ಹೇಳಿದ್ದು ಭಾರೀ ಕುತೂಹಲ ಮೂಡಿಸಿದೆ. ಪ್ರತಿ ಲೋಕಸಭೆಗೆ(Loksabhe) ಅಮೇಥಿಯಿಂದ ಸ್ಪರ್ಧಿಸುತ್ತಿದ್ದ ಸೋನಿಯಾ ರಾಜ್ಯಸಭೆಗೆ ಆಯ್ಕೆ ಆಗಿದ್ದಾರೆ. ಕ್ಷೇತ್ರ ಕೂಡ ಖಾಲಿ ಇದ್ದು ಸಮಾಜವಾದಿ ಪಾರ್ಟಿ 80 ಕ್ಷೇತ್ರಗಳಲ್ಲಿ 17 ಕ್ಷೇತ್ರ ಕಾಂಗ್ರೆಸ್‌ಗೆ(Congress) ಬಿಟ್ಟುಕೊಟ್ಟಿದೆ. ರಾಹುಲ್ ಬರ್ತಾರೆ,ಪ್ರಿಯಾಂಕ್ ನಿಲ್ತಾರೆ ಅಂತಾ ಹೇಳಲಾಗ್ತಿದ್ದು ಆದ್ರೆ ಈಗ ವಾದ್ರಾ(Robert Vadra) ಸ್ಪರ್ಧೆ ಕದನ ಕಣ ಮತ್ತಷ್ಟು ರೋಚಕತೆ ಪಡೆದಿದೆ. ಯುಪಿಯಲ್ಲಿ ಎರಡು ಕ್ಷೇತ್ರಕ್ಕೆ ಟಿಕೆಟ್ ಘೋಷಣೆ ಬಾಕಿ ಇದ್ದು, ಅಮೇಥಿ, ರಾಯಬರೇಲಿಗೆ ಅಭ್ಯರ್ಥಿ ಘೋಷಣೆ ಆಗಿಲ್ಲ. 80ರಲ್ಲಿ 17 ಕ್ಷೇತ್ರವನ್ನು ಸಮಾಜವಾದಿ ಅಖಿಲೇಶ್ ಕೊಟ್ಟಿದ್ದಾರೆ.

ಇದನ್ನೂ ವೀಕ್ಷಿಸಿ:  Mandya: ಎಚ್‍ಡಿಕೆ V/S ಸ್ಟಾರ್ ಚಂದ್ರು ಯಾರ ಕೈ ಮೇಲಾಗುತ್ತೆ? ಕಾಂಗ್ರೆಸ್ ಗ್ಯಾರಂಟಿ ಗೆಲ್ಲುತ್ತಾ? ಎಚ್‍ಡಿಕೆ ಮೈತ್ರಿನಾ ?