
SC/ST ಮೀಸಲಾತಿ ಹೆಚ್ಚಳ, ಭುಗಿಲೆದ್ದ ಜ್ವಾಲಾಮುಖಿ: ಜೇನುಗೂಡಿಗೆ ಕೈ ಹಾಕಿದ್ರಾ ಸಿಎಂ ಬೊಮ್ಮಾಯಿ?
Karnataka SC/ST Reservation Hike Explained: ಬೊಮ್ಮಾಯಿ ಸುತ್ತ ಸುತ್ತುತ್ತಿರುವ ಈ ಮಿಸಲಾತಿ ಚಕ್ರವ್ಯೂಹದ ಅಸಲಿಯತ್ತೇನು? ಮುಖ್ಯಮಂತ್ರಿ ಬೊಮ್ಮಾಯಿ ಜೇನುಗೂಡಿಗೆ ಕೈ ಹಾಕಿ ಬಿಟ್ರಾ? ಬೊಮ್ಮಾಯಿ ಸುತ್ತ ಸುತ್ತಿಕೊಂಡಿರೋ ಮೀಸಲಾತಿ ಚಕ್ರವ್ಯೂಹದ ಮುಂದಿನ ಪರಿಣಾಮಗಳೇನೇನು? ಇಲ್ಲಿದೆ ಕಂಪ್ಲೀಟ್ ವರದಿ
ಬೆಂಗಳೂರು (ಅ. 14): ಮೀಸಲಾತಿ ಚಕ್ರವ್ಯೂಹ. ಇದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ (CM Basavaraj Bommai) ಸುತ್ತ ಸುತ್ತುತ್ತಿರುವ ಬೆಂಕಿವ್ಯೂಹ, ಬೆಂಕಿಯ ಬಲೆ. ಒಂದು ಅಸ್ತ್ರ ಪ್ರಯೋಗಿಸಿದ್ರೆ, ತಿರುಗಿ ಬಿದ್ದದ್ದು ಮೂರ್ನಾಲ್ಕು ಅಸ್ತ್ರಗಳು. ಒಂದು ದಾಳ ಉರುಳಿಸಿದ್ರೆ, ಉಲ್ಟಾ ಬಿದ್ದಿರೋದು ನಾಲ್ಕಾರು ದಾಳಗಳು. ಸಿಎಂ ಬೊಮ್ಮಾಯಿಯವರ ಸುತ್ತ ಸುತ್ತುತ್ತಿರುವ ಮೀಸಲಾತಿ ಚಕ್ರವ್ಯೂಹ (Reservation Politics) ಎದ್ದು ನಿಂತದ್ದೇ ಎಸ್‌ಸಿ ಎಸ್‌ಎಸ್ಟಿ (SC ST Reservation) ಸಮುದಾಯಗಳಿಗೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಘೋಷಣೆ ಮಾಡಿದ ನಂತರ. ಹಾಗಾದ್ರೆ ಎಸ್‌ಸಿ ಎಸ್‌ಎಸ್ಟಿಗಳಿಗೆ ಮೀಸಲಾತಿ ಹೆಚ್ಚಿಸೋದು ಅಂದುಕೊಂಡಷ್ಟು ಸುಲಭನಾ? ಆ ಹಾದಿಯಲ್ಲಿ ಬೊಮ್ಮಾಯಿಯವರಿಗೆ ಎದುರಾಗಲಿರೋ ಚಾಲೆಂಜ್‌ಗಳೇನು? ಅಷ್ಟಕ್ಕೂ ಬೊಮ್ಮಾಯಿ ಸುತ್ತ ಸುತ್ತುತ್ತಿರುವ ಈ ಮಿಸಲಾತಿ ಚಕ್ರವ್ಯೂಹದ ಅಸಲಿಯತ್ತೇನು? ಮುಖ್ಯಮಂತ್ರಿ ಬೊಮ್ಮಾಯಿವರೂ ಜೇನುಗೂಡಿಗೆ ಕೈ ಹಾಕಿ ಬಿಟ್ರಾ? ಬೊಮ್ಮಾಯಿ ಸುತ್ತ ಸುತ್ತಿಕೊಂಡಿರೋ ಮೀಸಲಾತಿ ಚಕ್ರವ್ಯೂಹದ ಮುಂದಿನ ಪರಿಣಾಮಗಳೇನೇನು? ಇಲ್ಲಿದೆ ಕಂಪ್ಲೀಟ್ ವರದಿ