Reservation: ಪಂಚಮಸಾಲಿ 'ಮೀಸಲಾತಿ' ಕತ್ತಿ ಮೇಲಿನ ನಡಿಗೆ: ಜ. 12ರಂದು ದೆಹಲಿಯಲ್ಲಿ ಮಹತ್ವದ ಸಭೆ?

ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ದು, ಪಂಚಮಸಾಲಿ ಮೀಸಲಾತಿ ವಿಚಾರವಾಗಿಯೂ ಎಚ್ಚರಿಕೆಯಿಂದ ಹೆಜ್ಜೆ ಇಡಲು ತಿಳಿಸಿದೆ.

Share this Video
  • FB
  • Linkdin
  • Whatsapp

ಮೀಸಲಾತಿ ವಿಚಾರದಲ್ಲಿ ಎಚ್ಚರಿಕೆ ವಹಿಸಲು ಸಿಎಂ ಬಸವರಾಜ ಬೊಮ್ಮಾಯಿ ಹೈಕಮಾಂಡ್ ಸಲಹೆ ನೀಡಿದೆ. ಸಮುದಾಯದ ಒತ್ತಡಕ್ಕೆ ಮಣಿದು ತಪ್ಪು ತೀರ್ಮಾನ ಮಾಡಬೇಡಿ. ಸರ್ವ ಪಕ್ಷಗಳ ಸಭೆ ಕರೆದು ಎಲ್ಲಾ ನಾಯಕರ ನಿಲುವು ತಿಳಿದುಕೊಳ್ಳಿ. ಮೀಸಲಾತಿಗೆ ಸಾಮಾಜಿಕ ನ್ಯಾಯವೇ ಮಾನದಂಡವಾಗಿರಬೇಕು. ಈ ವಿಚಾರವಾಗಿ ಡಿ. 30 ಮತ್ತು 31ರ ಅಮಿತ್‌ ಶಾ ಭೇಟಿಯಲ್ಲಿ ಚರ್ಚೆ ಆಗಬಹುದು ಹೊರತು, ನಿರ್ಣಯಗಳು ಆಗುವುದಿಲ್ಲ. ಜನವರಿ 12ರಂದು ದೆಹಲಿಯಲ್ಲಿ ಇದಕ್ಕೆ ಸಂಬಂಧಿಸಿದಂತೆ ಮತ್ತೊಂದು ಸಭೆ ಮಾಡಲಾಗುತ್ತದೆ. ಮತ್ತೊಮ್ಮೆ ಸಿಎಂ ಬೊಮ್ಮಾಯಿ ದೆಹಲಿಗೆ ಭೇಟಿ ನೀಡಲಿದ್ದಾರೆ.

Related Video