
ಸಿಗದ ಸಚಿವ ಸ್ಥಾನ: ಮುಂದಿನ ವಾರ ರೆಬೆಲ್ ಶಾಸಕರ ಸಭೆ
ಸಭೆಯಲ್ಲಿ 10 ಕ್ಕೂ ಹೆಚ್ಚು ರೆಬೆಲ್ ಶಾಸಕರು ಭಾಗಿ| ಸಂಪುಟಕ್ಕೆ ಸಿ.ಪಿ. ಯೋಗೇಶ್ವರ್ ಸೇರ್ಪಡೆಯಾಗುತ್ತಿದ್ದಂತೆ ಆಕ್ರೋಶ ವ್ಯಕ್ತಪಡಿಸಿರುವ ರೇಣುಕಾಚಾರ್ಯ| ಯೋಗೇಶ್ವರ್ ವಿರುದ್ಧದ ದಾಖಲೆ ಸಮೇತ ಅರುಣ್ ಸಿಂಗ್ ಅವರಿಗೆ ದೂರು ಕೊಟ್ಟ ರೇಣು|
ಬೆಂಗಳೂರು(ಜ.15): ಮುಂದಿನ ವಾರ ರೆಬೆಲ್ ಶಾಸಕರ ಸಭೆ ನಡೆಯಲಿದೆ. ಈ ಸಭೆಯಲ್ಲಿ 10 ಕ್ಕೂ ಹೆಚ್ಚು ರೆಬೆಲ್ ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಹೇಳಿದ್ದಾರೆ. ಸಂಪುಟಕ್ಕೆ ಸಿ.ಪಿ. ಯೋಗೇಶ್ವರ್ ಅವರು ಸೇರ್ಪಡೆಯಾಗುತ್ತಿದ್ದಂತೆ ಆಕ್ರೋಶ ವ್ಯಕ್ತಪಡಿಸಿರುವ ರೇಣುಕಾಚಾರ್ಯ ಅವರ ವಿರುದ್ಧದ ದಾಖಲೆ ಸಮೇತ ಅರುಣ್ ಸಿಂಗ್ ಅವರಿಗೆ ದೂರು ಕೊಟ್ಟಿರುವುದಾಗಿ ಹೇಳಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ