ರಾಮನಗರ ಅಭಿವೃದ್ಧಿ ಮಾಡಿದ್ದು ನನ್ನ ಗಂಡ ಎಂದ ಅನಿತಾ ಕುಮಾರಸ್ವಾಮಿ!

ಮಂಡ್ಯ ಹಾಗೂ ರಾಮನಗರ ಪಾಲಿಟಿಕ್ಸ್‌ ದಿನೇ ದಿನೇ ಹೊಸ ತಿರುವುದು ಪಡೆದುಕೊಳ್ಳುತ್ತಿದೆ. ಇಂದು ಹಾರೋಹಳ್ಳಿ ತಾಲೂಕು ಕಚೇರಿ ಉದ್ಧಾಟನೆ ವೇಳೆ ರಾಮನಗರ ಅಭಿವೃದ್ಧಿ ವಿಚಾರದದಲ್ಲಿ ಸಚಿವ ಅಶ್ವತ್ಥ್‌ ನಾರಾಯಣ್‌ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ನಡುವಿನ ವಾಕ್ಸಮರಕ್ಕೆ ಕಾರಣವಾಯಿತು.

First Published Feb 21, 2023, 9:02 PM IST | Last Updated Feb 21, 2023, 9:02 PM IST

ರಾಮನಗರ (ಫೆ.21):  ರಾಮನಗರ ಪಾಲಿಟಿಕ್ಸ್‌ ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈ ಹಿಂದೆ ಡಿಕೆ ಬ್ರದರ್ಸ್ Vs  ಅಶ್ವತ್ಥನಾರಾಯಣ ನಡುವೆ 'ಗಂಡಸ್ತನ' ಯುದ್ಧಕ್ಕೆ ಸಾಕ್ಷಿಯಾಗಿದ್ದ ರಾಮನಗರ ಇಂದು ಅಶ್ವತ್ಥನಾರಾಯಣ ಹಾಗೂ ಅನಿತಾ ಕುಮಾರಸ್ವಾಮಿ ನಡುವೆ ವಾಗ್ಯುದ್ಧಕ್ಕೆ ವೇದಿಕೆಯಾಗಿದೆ.  ಅನಿತಾ ಕುಮಾರಸ್ವಾಮಿಯಂತೂ ಅಶ್ವತ್ಥ್‌ ವಿರುದ್ಧ ಕೆಂಡಾಮಂಡಲರಾಗಿದ್ದರು.

ರಾಮನಗರದಲ್ಲಿ ವೇದಿಕೆ ಮೇಲೆ ಅಶ್ವತ್ಥ್‌ನಾರಾಯಣ Vs ಅನಿತಾ ಕುಮಾರಸ್ವಾಮಿ ಟಾಕ್‌ವಾರ್!

ರಾಮನಗರ ಅಭಿವೃದ್ಧಿ ಮಾಡಿದ್ದು ಬಿಜೆಪಿಯ ಸಾಧನೆ. ಇಲ್ಲಿನ ಯೋಜನೆಯನ್ನು ಸಂಪೂರ್ಣವಾಗಿ ಮುಕ್ತಾಯ ಮಾಡಿದ್ದು ಸರ್ಕಾರದ ಸಾಧನೆ. ಬಿಜೆಪಿ ಸರ್ಕಾರದಲ್ಲಿ 12 ಹೊಸ ತಾಲೂಕು ಘೋಷಣೆಯಾಗಿದೆ. ರಾಮನಗರದಲ್ಲಿ ಮೆಡಿಕಲ್‌ ಕಾಲೇಜು ಬಿಜೆಪಿ ಘೋಷಣೆ ಮಾಡಿದೆ ಎಂದು ಹೇಳಿದರು.