ರಾಜ್ಯಸಭಾ ಫೈಟ್: ಜೆಡಿಎಸ್ ಬಂಡಾಯ ಶಾಸಕರ ನಡೆ ಏನು..?

ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ರಾಜ್ಯಸಭೆ ಚುನಾವಣೆಯ ಮತದಾನ ಇಂದು ನಡೆಯಲಿದ್ದು, 4 ನೇ ಸ್ಥಾನ ಯಾವ ಪಕ್ಷದ ಪಾಲಾಗಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಒಟ್ಟು 4 ಸ್ಥಾನಗಳ ಪೈಕಿ ಮೊದಲ ಮೂರು ಸ್ಥಾನಗಳ ಗೆಲುವು ಬಹುತೇಕ ನಿಶ್ಚಿತವಾಗಿವೆ. 

Share this Video
  • FB
  • Linkdin
  • Whatsapp

ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ರಾಜ್ಯಸಭೆ ಚುನಾವಣೆಯ (Rajyasabha Polls) ಮತದಾನ ಇಂದು ನಡೆಯಲಿದ್ದು, 4 ನೇ ಸ್ಥಾನ ಯಾವ ಪಕ್ಷದ ಪಾಲಾಗಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಒಟ್ಟು 4 ಸ್ಥಾನಗಳ ಪೈಕಿ ಮೊದಲ ಮೂರು ಸ್ಥಾನಗಳ ಗೆಲುವು ಬಹುತೇಕ ನಿಶ್ಚಿತವಾಗಿವೆ. ಆದರೆ, ನಾಲ್ಕನೇ ಸ್ಥಾನಕ್ಕಾಗಿ ಮೂರೂ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಪೈಪೋಟಿ ಜೋರಾಗಿದೆ.

ರಾಜ್ಯಸಭಾ ಫೈಟ್: ಬಿಜೆಪಿಗೆ 2, ಕಾಂಗ್ರೆಸ್‌ 1 ಜಯ, 4 ನೇ ಸ್ಥಾನಕ್ಕೆ ಹಣಾಹಣಿ

ಇನ್ನು ತೆರೆಮರೆಯಲ್ಲಿ 3 ಪಕ್ಷಗಳ ಲೆಕ್ಕಾಚಾರ, ರಾಜಕೀಯ ತಂತ್ರ ಜೋರಾಗಿ ನಡೆದಿದೆ. ‘ರಾಜ್ಯಸಭೆ ಚುನಾವಣೆಯಲ್ಲಿ ಕೋಮುವಾದವನ್ನೇ ಉಸಿರಾಡುತ್ತಿರುವ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಲು ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸಿ.’ ಹೀಗಂತ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಜೆಡಿಎಸ್‌ ಶಾಸಕರಿಗೆ ಬಹಿರಂಗ ಪತ್ರ ಬರೆದು ಮನವಿ ಮಾಡಿದ್ದು, ರಾಜಕೀಯವಾಗಿ ಭಾರಿ ಚರ್ಚೆ ಹುಟ್ಟುಹಾಕಿದೆ. ಜೆಡಿಎಸ್‌ ಶಾಸಕರಿಗೆ ಸಿದ್ದು ಪತ್ರ ಬರೆದಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದು, ಪತ್ರ ಬರೆದಿರುವುದು ನಾಚಿಕೆಗೇಡು ಎಂದು ಕಿಡಿಕಾರಿದ್ದಾರೆ. ಇವೆಲ್ಲದರ ಬಗ್ಗೆ ವಿಸ್ತೃತ ವರದಿ ಇಲ್ಲಿದೆ. 

Related Video