Asianet Suvarna News Asianet Suvarna News

News Hour: ನಾಳೆ ರಾಜ್ಯಕ್ಕೆ ರಾಹುಲ್‌, ಬಿಜೆಪಿಯನ್ನ ರುಬ್ಬೋಕೆ ಕಾಂಗ್ರೆಸ್‌ ರೆಡಿ!

ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಬುಧವಾರ ಚುನಾವಣಾ ಪ್ರಚಾರಕ್ಕಾಗಿ ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಹೈವೋಲ್ಟೇಜ್‌ ಮಂಡ್ಯ ಹಾಗೂ ಕೋಲಾರ ಕ್ಷೇತ್ರಗಳಲ್ಲಿ ಅವರು ಮತಬೇಟೆ ಮಾಡಲಿದ್ದಾರೆ.
 

ಬೆಂಗಳೂರು (ಏ.16): ರಾಜ್ಯದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರಕ್ಕೆ ರಾಹುಲ್ ಬುಧವಾರ ಎಂಟ್ರಿಯಾಗಲಿದ್ದಾರೆ. ಸಕ್ಕರೆ ನಾಡು ಮಂಡ್ಯದಿಂದಲೇ ರಾಹುಲ್‌ ಗಾಂಧಿ ಪ್ರಚಾರ ಆರಂಭಿಸಲಿದ್ದಾರೆ. ಮಂಡ್ಯದ ಪಿಇಎಸ್ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಸಮಾವೇಶ ನಡೆಯಲಿದೆ.

ಸಮಾವೇಶಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಜನರನ್ನ ಸೇರಿಸೋಕೆ ಕಾಂಗ್ರೆಸ್​​​ನಿಂದ ಸಿದ್ಧತೆ ನಡೆಸಲಾಗಿದೆ. ಕೈ ಅಭ್ಯರ್ಥಿ ಸ್ಟಾರ್ ಚಂದ್ರು ಪರ ರಾಹುಲ್‌ ಪ್ರಚಾರ ಮಾಡಲಿದ್ದು, ಆ ಬಳಿಕ ಕೋಲಾರಕ್ಕೆ ತೆರಳಲಿದ್ದಾರೆ. ಒಂದೇ ದಿನ ಎರಡು ಸಮಾವೇಶದಲ್ಲಿ ಭಾಗಿಯಾಗಿ ರಾಹುಲ್‌ ಮತಬೇಟೆ ನಡೆಸಲಿದ್ದಾರೆ.

Lok Sabha Election 2024: ಏ.17ಕ್ಕೆ ಮಂಡ್ಯ, ಕೋಲಾರದಲ್ಲಿ ರಾಹುಲ್‌ ಗಾಂಧಿ ಪ್ರಚಾರ

ಸಮಾವೇಶದ ಮೂಲಕ ಕಾಂಗ್ರೆಸ್ ಕಾರ್ಯಕರ್ತರಿಗೆ ರಾಹುಲ್‌ ಗಾಂಧಿ ಉತ್ಸಾಹ ತುಂಬಲಿದ್ದಾರೆ. ಟಾರ್ಗೆಟ್ 20 ಗೆಲ್ಲೋಕೆ ನಾಳೆ ರಾಹುಲ್ ಗಾಂಧಿ ರಣಕಹಳೆ ಮೊಳಗಿಸಲಿದ್ದಾರೆ. ರಾಹುಲ್‌ ಗಾಂಧಿ ಬಳಿಕ ಪ್ರಿಯಾಂಕಾ ಗಾಂಧಿ ಕೂಡ ಕರ್ನಾಟಕಕ್ಕೆ ಬರುವ ಸಾಧ್ಯತೆ ಇದೆ.
 

Video Top Stories