ಕಾಂಗ್ರೆಸ್ ನಲ್ಲಿ ಒಳಬೇಗುದಿ ರಾಜ್ಯ ನಾಯಕರನ್ನು ದೆಹಲಿಗೆ ಕರೆಸಿಕೊಂಡ ರಾಹುಲ್

ರಾಜ್ಯ ಕಾಂಗ್ರೆಸ್ ನಲ್ಲಿ ಒಳಬೇಗುದಿ ಹೆಚ್ಚಿದ್ದು,  ಹೈಕಮಾಂಡ್ ನಾಯಕರ ಬುಲಾವ್ ಹಿನ್ನೆಲೆಯಲ್ಲಿ   ರಾಜ್ಯ ನಾಯಕರು ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಿ ಸಭೆಯಲ್ಲಿ ಭಾಗಿಯಾಗಿದ್ದಾರೆ.

First Published Feb 24, 2022, 3:30 PM IST | Last Updated Feb 24, 2022, 3:30 PM IST

ಬೆಂಗಳೂರು(ಫೆ.24): ರಾಜ್ಯ ಕಾಂಗ್ರೆಸ್ ನಲ್ಲಿ ಒಳಬೇಗುದಿ ಹೆಚ್ಚಿದ್ದು,  ಹೈಕಮಾಂಡ್ ನಾಯಕರ ಬುಲಾವ್ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ರಾಜ್ಯ ನಾಯಕರು ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು, ಪಕ್ಷದ ಹೋರಾಟ, ಮುಂದಿನ ಕಾರ್ಯತಂತ್ರ, ಚುನಾವಣಾ ತಯಾರಿ, ಪಕ್ಷ ಸಂಘಟನೆ, ಕಾರ್ಯಕ್ರಮಗಳು, ಹೋರಾಟ ಮಾತ್ರವಲ್ಲ ರಾಜ್ಯ ಕಾಂಗ್ರೆಸ್ ಆಂತರಿಕ ಭಿನ್ನಮತಕ್ಕೆ ರಾಹುಲ್ ಗಾಂಧಿ (Rahul gandhi) ಮದ್ದು ಅರೆಯಲು ಮುಂದಾಗಿದ್ದಾರೆ.

ರಾಜ್ಯ ಕಾಂಗ್ರೆಸಿಗರ ಒಳ ಬೇಗುದಿ ತಣಿಸಲು ರಾಹುಲ್‌ ಸಭೆ: ಸಿದ್ದು, ಡಿಕೆಶಿ ಸೇರಿ 15 ನಾಯಕರ ದಂಡು ದಿಲ್ಲಿಗೆ!

ಮುಂದಿನ ವಿಧಾನಸಭಾ ಚುನಾವಣೆಗೆ (Assembly Elections) ಪಕ್ಷವನ್ನು ಸಜ್ಜುಗೊಳಿಸುವ ಗುರಿಯನ್ನು ಹೊಂದಿದ್ದಾರೆ.  ಸಭೆಯ ಬಳಿಕ ಇನ್ನಷ್ಟು ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ ಚರ್ಚಿಸಲಿರುವ ಕಾಂಗ್ರೆಸ್ ನಾಯಕರು, ರಾಜ್ಯದಲ್ಲಿ ಕಾಂಗ್ರೆಸ್ ಬಲವರ್ಧನೆಗೆ ಅಗತ್ಯವಿರುವ ಎಲ್ಲ ವಿಧದ ಮಾರ್ಗದರ್ಶನ ಪಡೆದು ನಾಳೆ ವಾಪಸ್ಸಾಗಲಿದ್ದಾರೆ.

Video Top Stories