2023 ವಿಧಾನಸಭೆ ಚುನಾವಣೆ ಗೆಲ್ಲಲು ಸಿದ್ದು-ಡಿಕೆಶಿಗೆ 12 ಸೂತ್ರ ಹೇಳಿದ ರಾಹುಲ್ ಗಾಂಧಿ

2023ರಲ್ಲಿ ರಾಜ್ಯ ವಿಧಾನಸಭಾ ಎಲೆಕ್ಷನ್​ ಇದೆ. ಎಲ್ಲ ಪಕ್ಷಗಳು ಈಗಿನಿಂದಲೇ ಎಲೆಕ್ಷನ್​​ ತಯಾರಿಯಲ್ಲಿ ತೊಡಗಿಕೊಂಡಿವೆ. ಕೇಂದ್ರದಲ್ಲಿ ಕಾಂಗ್ರೆಸ್​ ಪಕ್ಷ ಮಾತ್ರ, ರಾಜ್ಯದ ಎಲೆಕ್ಷನ್​​​​ ತಯಾರಿಯನ್ನು ತುಂಬಾ ಸೀರಿಯಸ್​ ತೆಗೆದುಕೊಂಡಂತಿದೆ. 

Share this Video
  • FB
  • Linkdin
  • Whatsapp

2023 ರಲ್ಲಿ ರಾಜ್ಯ ವಿಧಾನಸಭಾ ಎಲೆಕ್ಷನ್​ (Assembly Election 2023) ಇದೆ. ಎಲ್ಲ ಪಕ್ಷಗಳು ಈಗಿನಿಂದಲೇ ಎಲೆಕ್ಷನ್​​ ತಯಾರಿಯಲ್ಲಿ ತೊಡಗಿಕೊಂಡಿವೆ. ಕೇಂದ್ರದಲ್ಲಿ ಕಾಂಗ್ರೆಸ್​ ಪಕ್ಷ ಮಾತ್ರ, ರಾಜ್ಯದ ಎಲೆಕ್ಷನ್​​​​ ತಯಾರಿಯನ್ನು ತುಂಬಾ ಸೀರಿಯಸ್​ ತೆಗೆದುಕೊಂಡಂತಿದೆ. ಈ ಬಾರಿ ಬಿಜೆಪಿಯಿಂದ ಅಧಿಕಾರ ಕಿತ್ತುಕೊಳ್ಳಬೇಕೆಂಬ ಹಠಕ್ಕೆ ಬಿದ್ದಂತಿದೆ ಕಾಂಗ್ರೆಸ್​​​. 2023ರ ಎಲೆಕ್ಷನ್​​ ಕುರಿತು ರಾಹುಲ್​​ ಗಾಂಧಿ (Rahul Gandhi) ಈಗ್ಲೇ ಪಾಠ ಶುರುವಿಟ್ಟುಕೊಂಡಿದ್ದಾರಂತೆ. ಡಿಕೆಶಿ ಮತ್ತು ಸಿದ್ದು (Siddaramaiah) ಇಬ್ಬರಿಗೂ ಸೈಲೆಂಟಾಗಿನೇ ಗುಡುಗಿದ್ದಾರಂತೆ. ರಾಜ್ಯದಲ್ಲಿ ಕಾಂಗ್ರೆಸ್​ ಸಾಧನೆ ಪಟ್ಟಿ ಹಿಡಿದುಕೊಂಡು ಇಬ್ಬರಿಗೂ ಬುದ್ದಿಮಾತು ಹೇಳಿದ್ದಾರಂತೆ. ಇನ್ಮುಂದೆ ರಾಜ್ಯದಲ್ಲಿ ಇಬ್ಬರು ಹೇಗೆ ವರ್ತಿಸಬೇಕು ಅನ್ನೋ ಪಾಠ ಮಾಡಿದ್ದಾರಂತೆ ರಾಹುಲ್​​. 

ಬಿಜೆಪಿ ಹೈಕಮಾಂಡ್ ಹೊಸ ಸೂತ್ರ, 2 ಬಾರಿ ಗೆದ್ದವರಿಗೆ ಟಿಕೆಟ್ ಮಿಸ್.?

ಇಬ್ಬರನ್ನೂ ಕೂರಿಸಿ ಪಾಠ ಮಾಡುವಾಗ ಮತ್ತೊಂದು ವಿಷಯದ ಕುರಿತು ಖಡಕ್​​ ಆಗಿನೇ ವಾರ್ನ್​​ ಮಾಡಿದ್ದಾರಂತೆ ರಾಹುಲ್​​. ರಾಜ್ಯ ಕಾಂಗ್ರೆಸ್​​​​​​ ಸಾಧನೆ ಪಟ್ಟಿ ಮಾತ್ರ ನನ್ನ ಹತ್ರ ಇದೆ ಎಂದುಕೊಳ್ಳಬೇಡಿ. ಅದರ ಜೊತೆ ನಿಮ್ಮಿಬ್ಬರ ರಪೋರ್ಟ್​​ ಸಹ ನನ್ನ ಹತ್ತಿರವಿದೆ. ಹೀಗಾಗಿ ನೀವಿಬ್ರು ಆ ಒಂದು ವಿಚಾರಕ್ಕೆ ಹುಶಾರಾಗಿರಿ ಎಂದು ಅವಾಜ್​​ ಹಾಕಿದ್ದಾರಂತೆ ರಾಹುಲ್​​. 

Related Video