ಕಾಂಗ್ರೆಸ್‌ ಕಾರ್ಯಕಾರಿಣಿ ಸಭೆಯಲ್ಲಿ ಅಲ್ಲೋಲ ಕಲ್ಲೋಲ, ರಾಹುಲ್ ಕಿಡಿ!

ಎಐಸಿಸಿ ಕಾರ್ಯಕಾರಿಣಿ ಸಭೆಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದ್ದು, ಸೋನಿಯಾ ರಾಜೀನಾಮೆ ಬೆನ್ನಲ್ಲೇ ರಾಹುಲ್ ಗಾಂಧಿ ಪತ್ರ ಬರೆದಿದ್ದ 23 ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿ ಕಾರಿದ್ದಾರೆ. 

First Published Aug 24, 2020, 4:01 PM IST | Last Updated Aug 24, 2020, 4:01 PM IST

ನವದೆಹಲಿ(ಆ.24):  ಎಐಸಿಸಿ ಕಾರ್ಯಕಾರಿಣಿ ಸಭೆಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದ್ದು, ಸೋನಿಯಾ ರಾಜೀನಾಮೆ ಬೆನ್ನಲ್ಲೇ ರಾಹುಲ್ ಗಾಂಧಿ ಪತ್ರ ಬರೆದಿದ್ದ 23 ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿ ಕಾರಿದ್ದಾರೆ. 

ಈ 23 ನಾಯಕರಲ್ಲಿ ಐವರು ಮಾಜಿ ಸಿಎಂಗಳಾಗಿದ್ದರೆ, 13 ಕೇಂದ್ರದ ಮಾಜಿ ಸಚಿವರೂ ಆಗಿದ್ದವರು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹುದ್ದೆಯಲ್ಲಿದ್ದವರೇ ಈಗ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪತ್ರ ಬರೆದಿರುವು ನಿಷ್ದುಠ ರಾಹುಲ್ ಅಸಮಾಧಾನಕ್ಕೆ ಕಾರಣವಾಗಿದೆ.

ಹೀಗಾಘಿ ನೀವೆಲ್ಲಾ ಬಿಜೆಪಿ ಜೊತೆ ರಹಸ್ಯವಾಗಿ ಕೈಜೋಡಿಸಿದ್ದೀರಿ ಎಂದು ಈ ಸಭೆಯಲ್ಲಿ ಮಾಜಿ ಸಿಎಂಗಳಾದ ಪಕ್ಷ ನಿಷ್ಠರಾಗಿರುವ ಗುಲಾಂ ನಬಿ ಆಜಾದ್, ಭೂಪಿಂದರ್ ಹೂಡಾ, ಪೃಥ್ವಿರಾಜ್ ಚೌಹಾಣ್, ವೀರಪ್ಪ ಮೊಯ್ಲಿ, ರಾಜೇಂದರ್ ಕೌರ್ ವಿರುದ್ಧ ರಾಗಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.