ಮೋದಿ VS ಸೋನಿಯಾ ವಿಚಾರಣೆ: ವಿಚಾರಣೆಗೆ ಮೋದಿ ಸ್ಪಂದಿಸಿದ್ದು ಹೇಗೆ! ಕೈ ಪಾಳಯದ ಪ್ರತಿರೋಧವೇಕೆ?
ಆಗ ಗುಜರಾತ್ ಸಿಎಂ ಆಗಿದ್ರು ನರೇಂದ್ರ ಮೋದಿ.. ಅವರೂ ಕೂಡ ಅವತ್ತು ವಿಚಾರಣೆ ನಡೆಸಿದ್ರು.. ಆಗ ಏನಾಗಿತ್ತು..? ಈಗ 2022.. ಸೋನಿಯಾ ಗಾಂಧಿ.. ರಾಹುಲ್ ಗಾಂಧಿ ವಿಚಾರಣೆ ನಡೀತಿದೆ.. ಈಗ ಏನೇನೆಲ್ಲಾ ಆಗ್ತಿದೆ..? ಅಂದು ವಿಚಾರಣೆಗೆ ಮೋದಿ ಸ್ಪಂದಿಸಿದ್ದು ಹೇಗೆ? ಇಂದು ಕೈ ಸೋನಿಯಾ ವಿಚಾರಣೆಗೆ ಕೈ ಪಾಳಯದ ಪ್ರತಿರೋಧವೇಕೆ..? ಅದೆಲ್ಲವನ್ನೂ ಹೇಳೋದೇ ಇವತ್ತಿನ ಸುವರ್ಣ ಫೋಕಸ್, ಮೋದಿ ವರ್ಸಸ್ ಸೋನಿಯಾ ವಿಚಾರಣೆ.
ಬೆಂಗಳೂರು (ಜುಲೈ 22): ನ್ಯಾಷನ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿಯವನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಈಗಾಗಲೇ ಒಂದು ಸುತ್ತಿನ ವಿಚಾರಣೆ ನಡೆಸಿದೆ. ಆದರೆ, ಸೋನಿಯಾ ಗಾಂಧಿ ವಿಚಾರಣೆಗೆ ತೆರಳುತ್ತಿದ್ದ ಬೆನ್ನಲ್ಲಿಯೇ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಎನ್ನುವ ಹೆಸರಿನಲ್ಲಿ ರಣಾಂಗಣ ಮಾಡಿದ್ದಾರೆ. ಹಾಗಿದ್ದಲ್ಲಿ, ತನಿಖಾ ಸಂಸ್ಥೆಗಳು ಈ ರೀತಿಯ ವಿಚಾರಣೆ ನಡೆಸಿದ್ದು ಇದೇ ಮೊದಲೇನಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಇಂಥದ್ದೊಂದು ವಿಚಾರಣೆಗೆ ಭಾಗಿಯಾಗಿದ್ದರು.
ಈಗ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಭಾಗಿಯಾಗಿದ್ದಾರೆ. ಈ ಎರಡೂ ವಿಚಾರಣೆಗಳ ನಡುವಿನ ವ್ಯತ್ಯಾಸವೇನು? ಅನ್ನೋದರ ವರದಿ ಇಲ್ಲಿದೆ. ಸೋನಿಯಾ ಗಾಂಧಿ ಅವರ ವಿಚಾರಣೆ ಬಳಿಕ, ಹೊರ ಬಂದ ಸತ್ಯವೇನೇನು? ಏನಾಯ್ತು ನ್ಯಾಷನಲ್ ಹೆರಾಲ್ಡ್ ಕೇಸ್..? ಸೋನಿಯಾ ಗಾಂಧಿ ಅವರನ್ನ ವಿಚಾರಣೆಗೆ ಕರೆಸಿಕೊಂಡಿದ್ದೇ ತಪ್ಪಾ..? ಅಸಲಿಗೆ ಸೋನಿಯಾ ಅವರನ್ನ ಯಾವ ಪ್ರಶ್ನೆ ಕೇಳಲಾಯ್ತು..? ಅವರು ಕೊಟ್ಟ ಉತ್ತರ ಏನು..?
ನಾವು ಬ್ರಿಟಿಷರ ಬಂದೂಕಿಗೆ ಹೆದರಿಲ್ಲ, ಇನ್ನು ಮೋದಿ ಬಂದೂಕಿಗೆ ಹೆದರ್ತೀವಾ?
ಸೋನಿಯಾ ಗಾಂಧಿಯವರನ್ನು ವಿಚಾರಣೆಗೆ ಕರೆದಿದ್ದಾರೆ ಎನ್ನುವ ಒಂದೇ ಕಾರಣಕ್ಕೆ ಇಂದು ಕಾಂಗ್ರೆಸ್ ದೊಡ್ಡ ಹೋರಾಟಕ್ಕೆ ಧುಮುಕಿದೆ. ಆದರೆ, ಯಾವುದೇ ವಿಚಾರಣೆ ಕೂಡ ಕಾರಣ ಇಲ್ಲದೆ ನಡೆಯೋದಿಲ್ಲ. ಅಷ್ಟಕ್ಕೂ ಈ ವಿಚಾರಣೆ ನಡೆಯೋಕೆ ಕಾರಣವೇನು?