Asianet Suvarna News Asianet Suvarna News

ನಾವು ಬ್ರಿಟಿಷರ ಬಂದೂಕಿಗೆ ಹೆದರಿಲ್ಲ, ಇನ್ನು ಮೋದಿ ಬಂದೂಕಿಗೆ ಹೆದರ್ತೀವಾ?

'ನಾವು ಬ್ರಿಟಿಷರ ಬಂದೂಕಿಗೆ ಹೆದರಿಲ್ಲ, ಇನ್ನು ಮೋದಿ ಬಂದೂಕಿಗೆ ಹೆದರ್ತೀವಾ? ನಾವು ಸೋನಿಯಾ ರಾಹುಲ್ ಗಾಂಧಿಗಾಗಿ ಹೋರಾಟ ಮಾಡ್ತಿಲ್ಲ, ಪ್ರಜಾಪ್ರಭುತ್ವ ಉಳಿಸಲು ಹೋರಾಡುತ್ತಿದ್ದೀವಿ, ಎಂದು ಕೃಷ್ಣೇ ಬೈರೇಗೌಡ ಗುಡುಗಿದ್ದಾರೆ

ಬೆಂಗಳೂರು (ಜುಲೈ 21): ರಾಷ್ಟ್ರರಾಜಧಾನಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಜಾರಿ ನಿರ್ದೇಶನಾಲಯ ಗುರುವಾರ ವಿಚಾರಣೆ ನಡೆಸಿತು. ಈ ವೇಳೆ ದೇಶಾದ್ಯಂತ ಪ್ರತಿಭಟನೆಗಳು ನಡೆದವು. ಕರ್ನಾಟಕದಲ್ಲಿ ನಡೆದ ಪ್ರತಿಭಟನೆಯ ವೇಳೆ, ಶಾಸಕ ಕೃಷ್ಣಬೈರೇಗೌಡ (MLA  Krishna Byre Gowda) ಹೇಳಿದ ಮಾತುಗಳು ಗಮನಸೆಳೆದಿವೆ. 'ನಾವು ಬ್ರಿಟಿಷರ ಬಂದೂಕಿಗೆ ಹೆದರಿಲ್ಲ, ಇನ್ನು ಮೋದಿ ಬಂದೂಕಿಗೆ ಹೆದರ್ತೀವಾ? ನಾವು ಸೋನಿಯಾ ರಾಹುಲ್ ಗಾಂಧಿಗಾಗಿ ಹೋರಾಟ ಮಾಡ್ತಿಲ್ಲ, ಪ್ರಜಾಪ್ರಭುತ್ವ ಉಳಿಸಲು ಹೋರಾಡುತ್ತಿದ್ದೀವಿ ಎಂದು ಹೇಳಿದ್ದಾರೆ.

ಇಂಥದ್ದನ್ನೆಲ್ಲಾ ಸಹಿಸಿಕೊಳ್ಳುವ ಶಕ್ತಿ ಕಾಂಗ್ರೆಸ್‌ ನಾಯಕರಿಗೆ ಇದೆ. ಇದು ಕಾಂಗ್ರೆಸ್ ಮೇಲೆ ಮಾಡಿರುವ ದಾಳಿಯಲ್ಲ ಇದು. ಇಡೀ ಪ್ರಜಾಪ್ರಭುತ್ವದ ಮೇಲೆ ನಡೆಯುತ್ತಿರುವ ದಾಳಿ. ಇಡಿಯವರ ವಿಚಾರಣೆಯನ್ನು ಎದುರಿಸುವ ನೈತಿಕ ಶಕ್ತಿ ಖಂಡಿತವಾಗಿ ಸೋನಿಯಾ ಗಾಂಧಿ ಅವರಿಗೆ ಇದೆ. ಇಂಥವರು ನೂರು ಕೇಸ್‌ಗಳನ್ನು ಹಾಕಿದ್ರೂ ರಾಹುಲ್‌ ಗಾಂಧಿ ಅದನ್ನು ಎದುರಿಸುತ್ತಾರೆ. ಇವತ್ತು ಕಾಂಗ್ರೆಸ್‌ ಬೀದಿಗಿಳಿದು ಹೋರಾಟ ನಡೆಸುತ್ತಿದೆ ಎಂದರೆ, ಇಂದು ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕು ಎನ್ನುವ ಉದ್ದೇಶಕ್ಕಾಗಿ ಮಾತ್ರ ಎಂದು ಹೇಳಿದ್ದಾರೆ.

ಏನಿದು ನ್ಯಾಷನಲ್ ಹೆರಾಲ್ಡ್ ಕೇಸ್, ರಾಜಕೀಯ ಸಂಚಲನಕ್ಕೆ ಕಾರಣವಾಗಿರುವ ಪ್ರಕರಣದ ಇತಿಹಾಸ!

ಇಡಿ, ಐಟಿಯಂಥ ಎಷ್ಟೇ ಸೀಳುನಾಯಿಗಳನ್ನು ನಮ್ಮ ಮೇಲೆ ಛೂ ಬಿಡಲಿ. ಇದಕ್ಕೆ ಹೆದರುವ ಜಾಯಮಾನ ಕಾಂಗ್ರೆಸ್‌ ಪಕ್ಷದಲ್ಲ. ನಾವು ಬ್ರಿಟಿಷರಿಗೆ ಹೆದರಿಲ್ಲ. ಅವರ ಜೈಲು, ಬಂದೂಕು ಯಾವುದಕ್ಕೂ ಹೆದರಿಲ್ಲ. ಇನ್ನೂ ಮೋದಿಗೆ ಹೆದರ್ತೀವಾ. ಎಲ್ಲದಕ್ಕೂ ನಾವು ತಯಾರಾಗಿರಬೇಕು ಎಂದು ಹೇಳಿದ್ದಾರೆ.

Video Top Stories