Asianet Suvarna News Asianet Suvarna News

ರಾಜ್ಯದಲ್ಲಿ ಮತ್ತೆ ನಮೋ ಮೇನಿಯಾ ಶುರು: ಈ ತಿಂಗಳು ಮೂರು ಬಾರಿ ಪ್ರಧಾನಿ ಆಗಮನ

ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯಲು ಬಿಜೆಪಿ ಕಸರತ್ತು ನಡೆಸುತ್ತಿದ್ದು, ಈ ತಿಂಗಳು ಕರ್ನಾಟಕದಲ್ಲಿ ಮೋದಿ ಮೇನಿಯಾ ಶುರುವಾಗಲಿದೆ ‌.
 

ಫೆಬ್ರವರಿ ತಿಂಗಳಿನಲ್ಲಿ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೇನಿಯಾ ಆರಂಭವಾಗಲಿದ್ದು, ಈ ತಿಂಗಳು ಮೂರು ಬಾರಿ ರಾಜ್ಯಕ್ಕೆ ನಮೋ ಎಂಟ್ರಿ ಕೊಡುತ್ತಿದ್ದಾರೆ.  ಒಂದೊಂದು ಪ್ರವಾಸದ ಹಿಂದೆ ನೂರಾರು ಲೆಕ್ಕಾಚಾರವಿದೆ. ಕಲ್ಯಾಣ ಕರ್ನಾಟಕ ಆಯ್ತು, ಇದೀಗ ಹಳೇ ಮೈಸೂರು ಮೇಲೆ ನಮೋ ಚಿತ್ತವಿದೆ. ಫೆಬ್ರವರಿ 6ರಂದು ತುಮಕೂರಿನ ಗುಬ್ಬಿಗೆ ಮೋದಿ ಭೇಟಿ ನೀಡಲಿದ್ದು, ಫೆಬ್ರವರಿ 13ರಂದು ಬೆಂಗಳೂರಿನಲ್ಲಿ ಏರ್‌ ಷೋಗೆ ಮೋದಿ ಚಾಲನೆ ನೀಡಲಿದ್ದಾರೆ.  ಫೆಬ್ರವರಿ 27ರಂದು ಶಿವಮೊಗ್ಗ ಏರ್‌ಪೋರ್ಟ್‌ಗೆ ಚಾಲನೆ ನೀಡಲಿದ್ದಾರೆ.

ಬಳ್ಳಾರಿಯಲ್ಲಿ ಸಹೋದರರ ಸವಾಲ್: 'ಗಣಿಧಣಿ' ವಿರುದ್ಧ ಸೋಮಶೇಖರ್‌ ರೆಡ್ಡಿ ಕಿಡಿ