ಬಳ್ಳಾರಿಯಲ್ಲಿ ಸಹೋದರರ ಸವಾಲ್: 'ಗಣಿಧಣಿ' ವಿರುದ್ಧ ಸೋಮಶೇಖರ್‌ ರೆಡ್ಡಿ ಕಿಡಿ 

ಬಳ್ಳಾರಿಯಲ್ಲಿ ಪತ್ನಿಯನ್ನ ತನ್ನ ವಿರುದ್ಧ ಕಣಕ್ಕಿಳಿಸಿದ ಜನಾರ್ದನ ರೆಡ್ಡಿ ವಿರುದ್ಧ ಸಹೋದರ ಸೋಮಶೇಖರ್‌ ರೆಡ್ಡಿ ಕಿಡಿ ಕಾರಿದ್ದಾರೆ.

First Published Feb 2, 2023, 11:18 AM IST | Last Updated Feb 2, 2023, 12:05 PM IST

ಬಳ್ಳಾರಿ ನಗರದಲ್ಲಿ ದಾಯಾದಿಗಳ ಭರ್ಜರಿ ಫೈಟ್‌ ಶುರುವಾಗಿದೆ. ಗಣಿ ನಗರದಲ್ಲಿ ಶಾಸಕ ಸೋಮಶೇಖರ್‌ ರೆಡ್ಡಿ ವರ್ಸಸ್ ಅರುಣಾ ಲಕ್ಷ್ಮಿರೆಡ್ಡಿ ಅಖಾಡ ಸಿದ್ಧವಾಗಿದೆ. ಜನಾರ್ದನರೆಡ್ಡಿ ಪತ್ನಿ ಸ್ಪರ್ಧೆಗೆ ಸೋಮಶೇಖರ್‌ ರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸೋದರರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. KKPP ಪಕ್ಷಕ್ಕೆ ಆಹ್ವಾನಿಸಿದ್ರು, ಆದರೆ ನಾನು ಬಿಜೆಪಿಯಲ್ಲೇ ಇರುವೆ ಎಂದು ಸೋಮಶೇಖರ್ ರೆಡ್ಡಿ ತಿಳಿಸಿದ್ದಾರೆ. ಈ ಬಾರಿಯು ಬಿಜೆಪಿ ವರಿಷ್ಠರು ನನಗೆ ಟಿಕೆಟ್‌ ಕೊಡ್ತಾರೆ. 2013ರಲ್ಲಿ ರೆಡ್ಡಿ ಜೈಲಿನಲ್ಲಿದ್ರು ಆಗ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿಲ್ಲ. ಜನಾರ್ದನ ರೆಡ್ಡಿಗಾಗಿ ತ್ಯಾಗ ಮಾಡಿದೆ. ಈಗ ರೆಡ್ಡಿ ತ್ಯಾಗ ಮಾಡಬಹುದಿತ್ತು, ಹೊಸ ಪಕ್ಷಕ್ಕೆ ಸೇರಿಲ್ಲ ಎಂದು ಪತ್ನಿಯನ್ನು ಕಣಕ್ಕಿಳಿಸಿದ್ದಾರೆಂದು ಸೋಮಶೇಖರ್‌ ರೆಡ್ಡಿ ಕಿಡಿ ಕಾರಿದ್ದಾರೆ.

Video Top Stories