ಕೊಡಗಿನಲ್ಲಿ ಮೊಟ್ಟೆ ಎಸೆತ ಘಟನೆ ಖಂಡಿಸಿ ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದ ಪ್ರತಾಪ್ ಸಿಂಹ!
ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಭಾರಿ ಗಲಭೆ ಸೃಷ್ಟಿಸಿ ಹಿಂದೂ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರನ್ನು ಬಿಜೆಪಿ ವಿರುದ್ಧವೇ ಎತ್ತಿಕಟ್ಟುವ ಪ್ರಯತ್ನ ನಡೆಯುತ್ತಿದೆ ಅನ್ನೋ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿತ್ತು. ಸಾವರ್ಕರ್ ಫೋಟೋ ತೆರವು ಇದರ ಭಾಗವಾಗಿದೆ. ಮುಂದುವರಿದು ಗಣೇಶೋತ್ಸವ ಗಲಾಟೆಯೂ ನಡೆಯಲಿದೆ ಎಂಬ ಮಾಹಿತಿ ನೀಡಿದೆ. ಇದರಂತೆ ಗಲಾಟೆಗಳು ಆರಂಭಗೊಂಡಿದೆ. ಸಿದ್ದು ಮೇಲೆ ಮೊಟ್ಟೆ ಎಸೆತ, ಸಾವರ್ಕರ್ ಫೋಟೋ ಗಲಾಟೆ ಸೇರಿದಂತೆ ಇಂದಿನ ಸಂಪೂರ್ಣ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಸಾವರ್ಕರ್ ಫೋಟೋ ವಿವಾದ ಹೇಳಿಕೆ ಸಿದ್ದರಾಮಯ್ಯನವರಿಗೆ ತೀವ್ರ ಹಿನ್ನಡೆ ತಂದಿದೆ. ಕೊಡಗು ಪ್ರವಾಸದಲ್ಲಿದ್ದ ಸಿದ್ದರಾಮಯ್ಯನವರಿಗೆ ಘೇರಾವ್ ಹಾಕಿದ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರು ಮೊಟ್ಟೆ ಎಸೆದ ಘಟನೆ ನಡೆದಿದೆ. ಟಿಪ್ಪು ಭಕ್ತ ಸಿದ್ದು ಕೊಡಗಿದೆ ಕಾಲಿಡುವುದು ಬೇಡ ಎಂದು ಪ್ರತಿಭಟನೆ ನಡೆದಿದೆ. ಕೊಡಗಿನಲ್ಲಿ ಸಿದ್ದರಾಮಯ್ಯನವರಿಗೆ ಮೊಟ್ಟೆ ಎಸೆದ ಘಟನೆಯನ್ನು ಸಂಸದ ಪ್ರತಾಪ್ ಸಿಂಹ ಖಂಡಿಸಿದ್ದಾರೆ. ಆದರೆ ಕೊಡಗಿಲ್ಲಿ ಸಿದ್ದು ವಿರುದ್ಧ ಈ ಮಟ್ಟಿಗೆ ಆಕ್ರೋಶ ವ್ಯಕ್ತಪಡಿಸಲು ಕಾರಣವೇನು ಅನ್ನೋದನ್ನು ಪ್ರತಾಪ್ ಸಿಂಹ ಬಿಚ್ಚಿಟ್ಟಿದ್ದಾರೆ. ಸಿದ್ದರಾಮಯ್ಯನವರ ಮುಸ್ಲಿಮ್ ಜಾಗದಲ್ಲಿ ಸಾವರ್ಕರ್ ಫೋಟೋ ಹಾಕಿದ್ದು ಸರಿಯಲ್ಲ ಎಂಬ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. ಮುಸ್ಲಿಮ್, ಹಿಂದೂ ಜಾಗ ಅಂತಾ ಇಲ್ಲ. ಭಾರತೀಯರ ಜಾಗ ಇದು ಎಂದು ಕೆಎಸ್ ಈಶ್ವರಪ್ಪ ಹೇಳಿದ್ದಾರೆ.