ನಾವು ಎಕ್ಸಿಟ್ ಪೋಲ್‌ಗಿಂತ ಹೆಚ್ಚು ಸ್ಥಾನ ಗೆಲ್ತೀವಿ, 400 ಸೀಟ್ ದಾಟ್ತೀವಿ: ಪ್ರಲ್ಹಾದ್ ಜೋಶಿ

ಎಕ್ಸಿಟ್ ಪೋಲ್‌ನಲ್ಲಿ ಪ್ರಚಂಡ ಬಹುಮತ ಸಿಕ್ಕಿದೆ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ ನೀಡಿದ್ದಾರೆ ಈ ವೇಳೆ ರಾಜ್ಯ ಕಾಂಗ್ರೆಸ್‌ ಸರ್ಕಾರದ ಬಗ್ಗೆ ಎಚ್ಚರಿಕೆಯನ್ನೂ ನೀಡಿದೆ. 

Share this Video
  • FB
  • Linkdin
  • Whatsapp

ಎಕ್ಸಿಟ್ ಪೋಲ್ ನಲ್ಲಿ (Exit Poll) ಪ್ರಚಂಡ ಬಹುಮತ ಸಿಕ್ಕಿದೆ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Union Minister Pralhad Joshi) ಹೇಳಿಕೆ ನೀಡಿದ್ದಾರೆ. ನಮ್ಮ ರಾಷ್ಟ್ರೀಯ ನಾಯಕರು ಸಹ ಇದನ್ನೇ ಹೇಳಿದ್ರು,ಆದರೆ, ಅನೇಕ ಜನ ಸಂಶಯ ವ್ಯಕ್ತಪಡಿಸಿದ್ದರು. ಆದರೆ ಇದೀಗ ಎಕ್ಸಿಟ್ ಪೋಲ್ ಖಚಿತಪಡಿಸಿದೆ.ನಾವು ಎಕ್ಸಿಟ್ ಪೋಲ್‌ ಗಿಂತ ಹೆಚ್ಚು ಸ್ಥಾನ ಗೆಲ್ತೀವಿ.400 ಸೀಟ್ ದಾಟುತ್ತೇವೆ,ಕಾಂಗ್ರೆಸ್‌ನವರು ಸುಳ್ಳರು,ಭ್ರಷ್ಟರು, ವಾಲ್ಮೀಕಿ ನಿಗಮದಲ್ಲಿ ಏನಾಯ್ತು?, ಒಬ್ಬ ಮಿನಿಸ್ಟರ್ ರನ್ನ ರಾಜೀನಾಮೆ ಕೊಡಿಸಲು ಆಗಿಲ್ಲ.ಈ ಹಗರಣದಲ್ಲಿ ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಬಾಗಿಯಾಗಿದ್ದಾರೆ, ಮೊದಲು ನಾಗೇಂದ್ರರನ್ನ ಬಂಧಿಸಬೇಕು ಎಂದು ಆಗ್ರಹ ಮಾಡಿದ್ದಾರೆ.ಆತ ಅರೆಸ್ಟ್ ಆದ್ರೆ ಮುಖ್ಯಮಂತ್ರಿಗಳ ಪಾತ್ರದ ಬಗ್ಗೆ ಗೊತ್ತಾಗುತ್ತದೆ. ಕಾಂಗ್ರೆಸ್‌ಗೆ ಚುನಾವಣೆ ಆಯೋಗದ ಮೇಲೆ ನಂಬಿಕೆ ಇಲ್ಲ,ಜನತಾ ಜನಾರ್ದನನ ಮೇಲೆ ವಿಶ್ವಾಸ ಇಲ್ಲ, ಹೀಗಾಗಿ ಜನತಾ ಜನಾರ್ದನ ಕಾಂಗ್ರೆಸ್ ಮೇಲೆ ವಿಶ್ವಾಸ ಇಟ್ಟಿಲ್ಲ ಎಂದು ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಬೆಂಗಳೂರಿನಲ್ಲಿ ಮಳೆ ಅವಾಂತರ: ನದಿಯಂತಾದ ರಸ್ತೆಗಳು..ಮನೆಗಳಿಗೆ ನುಗ್ಗಿದ ನೀರು

Related Video