Praja Dhwani Yatre: ಸಿದ್ದರಾಮಯ್ಯ ಹೊಗಳುವ ಹಾಡನ್ನು ಹಾಡದಂತೆ ತಡೆದ ಡಿಕೆ ಸುರೇಶ್!

ಹಾಸನದಲ್ಲಿ ಕಾಂಗ್ರೆಸ್‌ನಿಂದ ಆಯೋಜಿಸಲಾಗಿದ್ದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಹಾಡು ಹೇಳುತ್ತಿದ್ದ ಕಲಾವಿದನನ್ನು ಸಂಸದ ಡಿ.ಕೆ. ಶಿವಕುಮಾರ್‌ ಅವರು ಹಾಡು ಹೇಳದಂತೆ ತಡೆದಿದ್ದಾರೆ.

Share this Video
  • FB
  • Linkdin
  • Whatsapp

ಹಾಸನ (ಜ.21): ಇಂದು ಹಾಸನದಲ್ಲಿ ಕಾಂಗ್ರೆಸ್‌ನಿಂದ ಆಯೋಜಿಸಲಾಗಿದ್ದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಹಾಡು ಹೇಳುತ್ತಿದ್ದ ಕಲಾವಿದನನ್ನು ಸಂಸದ ಡಿ.ಕೆ. ಶಿವಕುಮಾರ್‌ ಅವರು ಹಾಡು ಹೇಳದಂತೆ ತಡೆದಿದ್ದಾರೆ.

ವೇದಿಕೆಯಲ್ಲಿ ಪದೇ ಪದೆ ಸಿದ್ದರಾಮಯ್ಯ ಅವರ ಪರವಾಗಿ ಇರುವ ಹಾಡುಗಳನ್ನು ಕಲಾವಿದನು ಹೇಳುತ್ತಿದ್ದನು. ಈ ವೇಳೆ ಪಕ್ಷದ ಕಾರ್ಯಕ್ರಮದಲ್ಲಿ ಒಬ್ಬರ ಕುರಿತಾಗಿ ಹೊಗಳುವ ಹಾಡನ್ನು ಹಾಡಬಾರದು ಎಂದು ಖಡಕ್‌ ವಾರ್ನಿಂಗ್‌ ನೀಡಿದ್ದಾರೆ. ಇದಾದ ನಂತರ ಸಿದ್ದು ಪರವಾಗಿ ಹಾಡು ಹೇಳುತ್ತಿದ್ದ ಕಲಾವಿದನು ತನ್ನ ಹಾಡನ್ನು ನಿಲ್ಲಿಸಿದ್ದಾನೆ. ಆದರೆ, ವೇದಿಕೆಯಲ್ಲಿ ಕುಳಿತಿರುವಾಗಲೇ ಡಿ.ಕೆ. ಸುರೇಶ್‌ ಸಿದ್ದರಾಮಯ್ಯ ಅವರ ಕುರಿತಾದ ಹಾಡನ್ನು ಹೇಳದಂತೆ ತಡೆದಿರುವುದರ ಘಟನೆಯ ಕುರಿತು ರಾಜಕೀಯ ವಲಯದಲ್ಲಿ ಪರ- ವಿರೋಧಗಳು ಚರ್ಚೆ ಆಗುತ್ತಿವೆ. ಇನ್ನು ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಹೇಳಿಕೊಳ್ಳುತ್ತಿದ್ದು, ಈ ಬಗ್ಗೆ ಇನ್ನೂ ಮುಸುಕಿನ ಗುದ್ದಾಟ ಮುಂದುವರೆದಿದೆ ಎನ್ನುವುದು ಈ ಘಟನೆಯಿಂದ ಬಹಿರಂಗವಾಗಿದೆ.

Related Video