ರಮೇಶ್ ರಾಸಲೀಲೆ ಪ್ರಕರಣ; ಯಾರ್ಯಾರು, ಏನೇನಂದ್ರು.?

ರಾಸಲೀಲೆ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷ ಹಾಗೂ ಸರ್ಕಾರಕ್ಕೆ ಉಂಟಾಗುವ ಮುಜುಗರ ತಪ್ಪಿಸಲು ರಮೇಶ್ ಜಾರಕಿಹೊಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 
 

First Published Mar 4, 2021, 4:08 PM IST | Last Updated Mar 4, 2021, 4:08 PM IST

ಬೆಂಗಳೂರು (ಮಾ. 04): ರಾಸಲೀಲೆ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷ ಹಾಗೂ ಸರ್ಕಾರಕ್ಕೆ ಉಂಟಾಗುವ ಮುಜುಗರ ತಪ್ಪಿಸಲು ರಮೇಶ್ ಜಾರಕಿಹೊಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

ಸಾಹುಕಾರ್ ಜಾರಕಿಹೊಳಿ ಆಯ್ತು, ಮಾಜಿ ಸಿಎಂ ಸೀಡಿ ಕೂಡಾ ಇದ್ಯಂತೆ!

ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರು ಸಾಹುಕಾರ್ ಪರ ಬ್ಯಾಟಿಂಗ್ ಬೀಸಿದರೆ, ವಿರೋಧ ಪಕ್ಷದವರು ತರಾಟೆಗೆ ತೆಗೆದುಕೊಂಡರು. 'ನಾನು ಜಾರಕಿಹೊಳಿ ಅವರಿಗೆ ನೈತಿಕ ಬೆಂಬಲ ಕೊಡುತ್ತೇನೆ. ಇದೊಂದು ರಾಜಕೀಯ ಪಿತೂರಿ ಎಂದು ಸಿಪಿ ಯೋಗೇಶ್ವರ್ ಹೇಳಿದ್ದಾರೆ. ಜಾರಕಿಹೊಳಿಯವರನ್ನು ಸಿಲುಕಿಸುವ ಪ್ರಯತ್ನ ನಡೆಸಲಾಗಿದೆ ಎಂದು ಅಶ್ವಥ್ ನಾರಾಯಣ್ ಹೇಳಿದರೆ, ಇಂತವರೆಲ್ಲಾ ಇರಬೇಕ್ರಿ.. ಅವರ ಪಾರ್ಟಿ ಎಂಥೆಂತವರನ್ನು ಇಟ್ಕೋತಾರೆ ನೋಡೋಣ ಎಂದು ಡಿಕೆಶಿ ಹೇಳಿದ್ದಾರೆ.