ಮಂಡ್ಯ ಕೇಸರಿಮಯ: ರೋಡ್‌ ಶೋದಲ್ಲಿ ನಮೋಗೆ ಹೂವಿನ ಮಳೆ

ಮಂಡ್ಯದ ಐ.ಬಿ. ಸರ್ಕಲ್‌ನಿಂದ ನಂದಾ ವೃತ್ತದವರೆಗೆ  ರೋಡ್‌ ಪ್ರಧಾನಿ ಶೋ .  ಕಾರಿನ ಹೊರಗೆ ನಿಂತುಕೊಂಡು ಜನರತ್ತ ಕೈಬೀಸಿದ ಪ್ರಧಾನಿ ಮೋದಿ.

Share this Video
  • FB
  • Linkdin
  • Whatsapp

ಮೋದಿ ಮಂಡ್ಯಕ್ಕೆ ಆಗಮಿಸಿದ್ದು, ಈ ಮೂಲಕ ಸಕ್ಕರೆ ನಾಡಲ್ಲಿ ಕಮಲ ಪರ ಮತಬೇಟೆ ನಡೆಸಲು ಸಜ್ಜಾಗಿದ್ದಾರೆ. ದೆಹಲಿ ಏರ್‌ಪೋರ್ಟ್‌ನಿಂದ ಮೈಸೂರಿನ ಏರ್‌ಪೋರ್ಟ್‌ಗೆ ಪ್ರಧಾನಿ ಮೋದಿ ಆಗಮಿಸಿ, ನಂತರ ವಿಶೇಷ ಹೆಲಿಕಾಪ್ಟರ್‌ ಮೂಲಕ ಮಂಡ್ಯದ ಪಿಇಎಸ್‌ ಕಾಲೇಜಿಗೆ ಲ್ಯಾಂಡ್‌ ಆಗಿದ್ದಾರೆ. ನಂತರ, ಮಂಡ್ಯದಲ್ಲಿ 1.8. ಕಿ.ಮೀ ದೂರದ ರೋಡ್‌ ಶೋ ಅನ್ನು ಪ್ರಧಾನಿ ಮೋದಿ ನಡೆಸುತ್ತಿದ್ದಾರೆ. ಮಂಡ್ಯದ ಐ.ಬಿ. ಸರ್ಕಲ್‌ನಿಂದ ನಂದಾ ವೃತ್ತದವರೆಗೆ ಈ ರೋಡ್‌ ಶೋ ನಡೆಯುತ್ತಿದ್ದು, ರಸ್ತೆಯ ಇಕ್ಕೆಲಗಳಲ್ಲೂ ಜನಸಾಗರ ಸೇರಿದೆ. ಪ್ರಧಾನಿ ಮೋದಿ ಕಾರಿನ ಹೊರಗೆ ನಿಂತುಕೊಂಡು ಜನರತ್ತ ಕೈಬೀಸಿದ್ದು, ಜನರು ಮೋದಿ ಮೋದಿ ಘೋಷಣೆ ಮಾಡಿದ್ದಾರೆ. ಜತೆಗೆ ಜೈ ಶ್ರೀರಾಮ್‌ ಹಾಗೂ ಭಾರತ್ ಮಾತಾ ಕೀ ಜೈ ಎಂಬ ಘೋಷಣೆಯನ್ನೂ ಮೊಳಗಿದ್ದಾರೆ. 

Related Video