48 ಗಂಟೆ.. 6 ಸಮಾವೇಶ.. 2 ರೋಡ್ ಶೋ ಮೋದಿ ಮಾತಿನಲ್ಲೇ ಬಾಚಿಕೊಂಡ್ರಾ ಮತಗಳಾ..?

ರಾಜ್ಯದಲ್ಲಿ ಎಲೆಕ್ಷನ್ ಬಿಸಿ ತುಂಬಾನೇ ಜೋರಾಗಿದ್ದು, ಬಿಜೆಪಿ  ಪಕ್ಷದ ಪರವಾಗಿ ಪ್ರಧಾನಿ ಮೋದಿ ಎರಡು ದಿನಗಳ ಪ್ರಚಾರ ಮಾಡಿದ್ದಾರೆ. 48 ಗಂಟೆಗಳಲ್ಲಿ ಮೋದಿ ಎಷ್ಟು ಸಮಾವೇಶಗಳನ್ನು ಮಾಡಿದ್ದಾರೆ? ಎಲ್ಲೆಲ್ಲಿ ರೋಡ್ ಶೋ ನಡೆಸಿದ್ದಾರೆ?  ಈ ವಿಡಿಯೋ ನೋಡಿ 

First Published May 1, 2023, 4:10 PM IST | Last Updated May 1, 2023, 4:10 PM IST

ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ದಿನದಿಂದ ದಿನಕ್ಕೆ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಅಬ್ಬರದ ಪ್ರಚಾರವನ್ನ ಹೆಚ್ಚಿಸಿದ್ದು, ಹಲವು ಪ್ರಯತ್ನಗಳನ್ನ ನಡೆಸಿದ್ದಾರೆ. ವಿಜಯಪುರದಲ್ಲಿ ಪ್ರಧಾನಿ ಮೋದಿ ಸಮಾವೇಶದಲ್ಲಿ ಕರ್ನಾಟಕವೆಂದರೆ ತುಂಬಾ ಮೆಚ್ಚುಗೆ. ಕರುನಾಡನ್ನು  ಅಭಿವೃದ್ಧಿಯಲ್ಲಿ ನಂಬರ್ ಒನ್ ರಾಜ್ಯವನ್ನಾಗಿ ಮಾಡುವ ಆಸೆಯನ್ನು ಹೊಂದಿದ್ದೇನೆ. ಅದಕ್ಕಾಗಿ ನಿಮ್ಮ ಆಶೀರ್ವಾದ ಬೇಕೆಂದು ಕೇಳಿಕೊಂಡರು. ಅದಲ್ಲದೆ ಖರ್ಗೆ ಮೋದಿಯನ್ನು ವಿಷಸರ್ಪ ಎಂದಿದ್ದನ್ನು ಮತ್ತೆ ನೆನಪಿಸಿದ್ದು,ಕಾಂಗ್ರೆಸ್ ಪಕ್ಷ ಬಾಬಾ ಸಾಹೇಬ್ ಅಂಬೇಡ್ಕರ್‌ನ್ನು ಬಿಟ್ಟಿಲ್ಲ ನಾನ್ಯಾವ ಲೆಕ್ಕ ಎಂದು ಹೇಳಿದರು. ಕಾಂಗ್ರೆಸ್ ಪಕ್ಷವು, ಬಾಬಾ ಸಾಹೇಬ್ ಅಂಬೇಡ್ಕರ್‌ಗೆ ಯಾವ ಶಬ್ದ ಬಳಸಿ ಬೈದಿತ್ತು ಎನ್ನುವುದನ್ನು  ಈ ಹಿಂದೆ ಇದೇ ಬೆಳಗಾವಿಯಲ್ಲಿ ಖುದ್ದು ಅಂಬೇಡ್ಕರ್ ಹೇಳಿದ್ದರು. ದೇಶದ್ರೋಹಿ.. ರಾಕ್ಷಸ.. ಡಿಕ್ಷನರಿಯಲ್ಲಿ ಇರುವ ಎಲ್ಲ ಕೆಟ್ಟ ಪದಗಳಿಂದ ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಬೈದಿತ್ತು. ಕಾಂಗ್ರೆಸ್ ಅವಾಗ ಹೇಗಿತ್ತು ಈಗಲು ಹಾಗೆ ಇದೆ.  ಹೀಗೆ ಹೇಳುವ ಮೂಲಕ ಕಾಂಗ್ರೆಸ್ ತಮ್ಮ ಮೇಲೆ ಆಗಾಗ ಬೈತಾನೇ ಇರುತ್ತೆ ಅನ್ನೋದನ್ನು ಪ್ರಧಾನಿ ಮೋದಿ ಹೇಳಿದರು.ಅದಲ್ಲದೆ  ಇಂತ ಕಾಂಗ್ರೆಸ್ ಪಕ್ಷವನ್ನು ನಿವೆಂದೂ ಕ್ಷಮಿಸಬಾರದೆಂದು ಬೆಳಗಾಗಿ ಜನರಲ್ಲಿ ಮೋದಿ ಕೇಳಿಕೊಂಡರು. 
 

Video Top Stories