ಮಂಡ್ಯ, ಧಾರವಾಡಕ್ಕೆ ನರೇಂದ್ರ ಮೋದಿ ಆಗಮನ, ಕರ್ನಾಟಕದಲ್ಲಿ ಪ್ರಧಾನಿ ಸಂಚಲನ!

ಧ್ರುವನಾರಾಯಣ ಅಗಲಿಗೆ ನಾಯಕರ ಕಣ್ಣೀರು, ಬೆಂಗಳೂರು ಮೈಸೂರು ಹೆದ್ದಾರಿ ಕ್ರಿಡಿಟ್ ಯಾರಿಗೆ? ಜನರು ತೀರ್ಮಾನಿಸಲಿ ಎಂದ ಬೊಮ್ಮಾಯಿ, ನಾಳೆ ಪ್ರಧಾನಿ ಮೋದಿ ಕರ್ನಾಟಕಕ್ಕೆ ಆಗಮನ, ಹತ್ತು ಹಲವು ಕಾರ್ಯಕ್ರಮ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ

Share this Video
  • FB
  • Linkdin
  • Whatsapp

ಮಾರ್ಚ್ 12ಕ್ಕೆ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಮೈಸೂರು ಬೆಂಗಳೂರು ಹೆದ್ದಾರಿ ಉದ್ಘಾಟನೆ, ಧಾರವಾಡದ ಐಐಟಿ ಕಾಲೇಜು ಉದ್ಧಾಟನೆ, ವಿಶ್ವದ ಅತೀ ಉದ್ದದ ರೈಲು ಪ್ಲಾಟ್‌ಫಾರ್ಮ್ ಉದ್ಘಾಟನೆ ಸೇರಿದಂತೆ ಹತ್ತು ಹಲವು ಯೋಜನೆಳಿಗೆ ಚಾಲನೆ ನೀಡಲಿದ್ದಾರೆ. ಮೈಸೂರಿಗೆ ಆಗಮಿಸಿರುವ ಮೋದಿ ಬಳಿಕ ಮಂಡ್ಯದಲ್ಲಿ ರೋಡ್ ಶೋ ನಡೆಸಲಿದ್ದಾರೆ. ಗೆಜ್ಜಲಗೆರೆಯಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಬಳಿಕ ಧಾರವಾಡಕ್ಕೆ ತೆರಳಲಿರುವ ಮೋದಿ ಹಲವು ಯೋಜನೆ ಉದ್ಘಾಟಿಸಲಿದ್ದಾರೆ. ಇದರ ನಡುವೆ ಮೈಸೂರು ಬೆಂಗಳೂರು ಹೆದ್ದಾರಿ ಕ್ರಿಡಿಟ್ ಪಡೆಯಲು ಕಾಂಗ್ರೆಸ್ ಹಾಗೂ ಜೆಡಿಎಸ್ ತುದಿಗಾಲಲ್ಲಿ ನಿಂತಿದೆ. ಈ ಹೆದ್ದಾರಿ ನಾವು ಆರಂಭಿಸಿದ ಯೋಜನೆ, ಬಿಜೆಪಿ ಸರ್ಕಾರ ಇದೇ ಯೋಜನೆಯನ್ನು ವಿಸ್ತರಿಸಿದದಾರೆ ಅಷ್ಟೆ. ಇದರ ಶ್ರೇಯಸ್ಸು ನಮಗೆ ಸಲ್ಲಬೇಕು ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಹಗ್ಗಜಗ್ಗಾಟ ನಡೆಸುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video