4 ದಿಕ್ಕು.. 100 ಗುರಿ.. ಶುರುವಾಯ್ತು ಮೋದಿ ಅಶ್ವಮೇಧ..!

ಮೂರನೇ ಬಾರಿಗೆ ದೇಶದ ಪ್ರಧಾನಿಯಾಗುವ ನಿಟ್ಟಿನಲ್ಲಿ ನರೇಂದ್ರ ಮೋದಿ ಜನ್ಮದಿಂದೇ ಬಿಜೆಪಿ ಶಪಥ ಮಾಡಲು ಅಣಿಯಾಗಿದೆ. 2014 ಹಾಗೂ 2019ರಲ್ಲಿ ಭಿನ್ನ ಭಿನ್ನ ತಂತ್ರಗಳಿಂದ ಯಶಸ್ಸಿನ ಶಿಖರವೇರಿದ್ದ ನರೇಂದ್ರ ಮೋದಿ, ಈ ಬಾರಿ ಯಾವ ತಂತ್ರದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ ಎನ್ನುವ ಕುತೂಹಲವೂ ಆರಂಭವಾಗಿದೆ

Share this Video
  • FB
  • Linkdin
  • Whatsapp

ಬೆಂಗಳೂರು (ಸೆ. 16):  9 ರಾಜ್ಯಗಳಲ್ಲಿ ಟಾರ್ಗೆಟ್ 100. ಇದು ಮೋದಿ ಪ್ಲಾನ್. ಕರ್ನಾಟಕದಲ್ಲಿ ಕನಿಷ್ಠ 25 ಸ್ಥಾನಗಳನ್ನು ಗೆಲ್ಲೋದು ಮೋದಿ ಗುರಿ. ಹಾಗಾದ್ರೆ ಕರ್ನಾಟಕದಲ್ಲಿ ಮೋದಿ ಅಶ್ವಮೇಧದ ಕುದುರೆ 25ರ ಲಕ್ಷ್ಯ ಭೇದಿಸುತ್ತಾ..? ಕುದುರೆ ಕಟ್ಟಿ ಹಾಕಲು ಹೊಂಚು ಹಾಕಿ ಕೂತಿರೋರ ಶಕ್ತಿ ಎಷ್ಟು..? 

ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರೋ 9 ರಾಜ್ಯಗಳಲ್ಲಿ ಕನಿಷ್ಠ 100 ಲೋಕಸಭಾ ಸ್ಥಾನಗಳನ್ನು ಗೆಲ್ಲೋದು ಮೋದಿ (Narendra Modi) ಪ್ಲಾನ್. ಅದಕ್ಕಾಗಿ ಮೋದಿ ಅಶ್ವಮೇಧದ ಕುದುರೆ ಹೊರಟು ನಿಂತಿದೆ. ಕರ್ನಾಟಕದಲ್ಲಿ ಮತ್ತೆ 25 ಸ್ಥಾನಗಳನ್ನು ಗೆಲ್ಲೋ ಮೋದಿ ಕನಸು ಈಡೇರುತ್ತಾ ಅನ್ನೋದೇ ಮುಂದಿರುವ ಪ್ರಶ್ನೆ. 4 ದಿಕ್ಕುಗಳ 9 ಅಖಾಡಗಳಲ್ಲಿ ಸೆಂಚುರಿ ಬಾರಿಸಲು ಮುಂದಾಗಿರೋ ಮೋದಿಯವರ ಮುಂದಿರೋ ಸವಾಲುಗಳೇನೇನು..? ಚುನಾವಣೆ ಗೆಲ್ಲಲು ಬಿಜೆಪಿಯ ಅಸಲಿ ಶಕ್ತಿ ಯಾವುದು ಅನ್ನೋ ಪ್ರಶ್ನೆಯೂ ಆರಂಭವಾಗಿದೆ.

PM Modi Birthday: ಬಡ ಜನರ 'ಅಚ್ಚೇದಿನ್‌' ಸಲುವಾಗಿ ಪ್ರಧಾನಿ ಮೋದಿ ಘೋಷಿಸಿದ 10 ಯೋಜನೆಗಳು

2023ರಲ್ಲಿ ವಿಧಾನಸಭಾ ಚುನಾವಣೆ ಎದುರಿಸಲಿರೋ 9 ರಾಜ್ಯಗಳಲ್ಲಿ 100 ಲೋಕಸಭಾ ಸ್ಥಾನಗಳನ್ನು ಗೆಲ್ಲಲು ಮೋದಿ ಪಣ ತೊಟ್ಟಿದ್ದಾರೆ. ಈ ಹಾದಿಯಲ್ಲಿ ಮೋದಿಯವರಿಗೆ ಅಷ್ಟೇ ಸವಾಲುಗಳು ಎದುರಾಗಲಿದೆ.

Related Video