Asianet Suvarna News Asianet Suvarna News

ಸರ್ಕಾರದ ಭಾಗ್ಯಗಳಿಂದ ಚೆಸ್ಕಾಂ ಸಿಬ್ಬಂದಿಗೆ ಪಿಕಲಾಟ: ಲೈಟ್‌ ಬಿಲ್‌ ಕಟ್ಟಿ ಅಂದ್ರೆ ಕಟ್ಟಲ್ಲ ಎನ್ನುತ್ತಿರುವ ಜನ !

ಸಿದ್ದರಾಮಯ್ಯನವರು ಎಲ್ಲಾರಿಗೂ ಕರೆಂಟ್‌ ಫ್ರೀ ಎಂದಿದ್ದಾರೆ. ಹಾಗಾಗಿ ನಾವು ಕರೆಂಟ್‌ ಬಿಲ್‌ ಕಟ್ಟಲ್ಲ ಎಂದು ಮಂಡ್ಯದಲ್ಲಿ ಚೆಸ್ಕಾಂ ಸಿಬ್ಬಂದಿಯನ್ನು ಜನ ತರಾಟೆಗೆ ತೆಗೆದುಕೊಂಡಿದ್ದಾರೆ.
 

First Published May 30, 2023, 4:48 PM IST | Last Updated May 30, 2023, 4:48 PM IST

ಮಂಡ್ಯ: ಮಂಡ್ಯದಲ್ಲಿ ಕರೆಂಟ್‌ ಬಿಲ್‌ ಚೆಸ್ಕಾಂ ಸಿಬ್ಬಂದಿಗೆ ತಲೆನೋವಾಗಿದೆ. ನಾನು ಸಿಎಂ ಸಿದ್ದರಾಮಯ್ಯಗಿಂತ ಶ್ರೀಮಂತನಲ್ಲ. ನಾನು ಕರೆಂಟ್‌ ಬಿಲ್‌ ಕಟ್ಟಲ್ಲ. ಸಿದ್ದರಾಮಯ್ಯ ಅವರು ನಿನಗೂ ಫ್ರೀ, ನನಗೂ ಫ್ರೀ ಅಂದಿದ್ದಾರೆ. ಹಾಗಾಗಿಯೇ ನಾವು ಕಾಂಗ್ರೆಸ್‌ಗೆ ಓಟ್‌ ಹಾಕಿದ್ದೇವೆ. ತಾಕತ್ತಿದ್ರೆ ಕರೆಂಟ್‌ ಫೀಜ್‌ ಕಿತ್ತು ಹಾಕಿ ನೋಡೋಣಾ ಎಂದು ಜನ ಪ್ರಶ್ನಿಸಿದ್ದಾರೆ. ಅವರಿಗೆ ಅವರ ಮಾತನ್ನು ಜಾರಿಗೆ ತರಲು ಆಗುವುದಿಲ್ಲ ಅಂದ್ರೆ ಈಗಲೇ ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದ್ದಾರೆ.

ಇದನ್ನೂ ವೀಕ್ಷಿಸಿ: ಮೋದಿ ಯುಗ ಆರಂಭವಾಗಿ 9 ವರ್ಷ, ಸಾಧಿಸಿದ್ದೆಷ್ಟು ?: ಕಾಂಗ್ರೆಸ್‌ನಿಂದ ಬಿಜೆಪಿಗೆ ಒಂಭತ್ತು ಪ್ರಶ್ನೆ