ತುಮಕೂರು ಲೋಕಸಭಾ ಟಿಕೆಟ್‌ಗೆ ಭಾರೀ ಡಿಮ್ಯಾಂಡ್‌! ಯಾರೆಲ್ಲಾ ಇದ್ದಾರೆ ರೇಸ್‌ನಲ್ಲಿ?

ಉಡುಪಿ-ಚಿಕ್ಕಮಗಳೂರಿನಿಂದ ಸಿ.ಟಿ. ರವಿ, ದಾವಣಗೆರೆಯಿಂದ ಎಂ.ಪಿ. ರೇಣುಕಾಚಾರ್ಯಗೆ ಲೋಕಸಭಾ ಟಿಕೆಟ್‌ ಸಿಗುತ್ತಾ?, ತುಮಕೂರಿನಲ್ಲಿ ಯಾರೆಲ್ಲಾ  ರೇಸ್‌ನಲ್ಲಿದ್ದಾರೆ?
 

First Published Jul 11, 2023, 11:58 PM IST | Last Updated Jul 11, 2023, 11:58 PM IST

ಬೆಂಗಳೂರು (ಜು.11): ಇನ್ನೊಂದು ಹತ್ತು ತಿಂಗಳಲ್ಲಿ ದೇಶದಲ್ಲಿ ಲೋಕಸಭಾ ಚುನಾವಣೆಯೆ ಫೀವರ್‌ ಆವರಿಸಲಿದೆ. ಇದರ ನಡುವೆ ಯಾವೆಲ್ಲಾ ಪಕ್ಷದಿಂದ ಯಾರಿಗೆಲ್ಲಾ ಟಿಕೆಟ್‌ ಸಿಗಬಹುದು ಎನ್ನುವ ಲೆಕ್ಕಾಚಾರಗಳೂ ಆರಂಭವಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಸೋತಂತ ಹಲವು ವ್ಯಕ್ತಿಗಳು ವಿಧಾನಸಭಾ ಟಿಕೆಟ್‌ನ ಆಕಾಂಕ್ಷಿಯಾಗಿದ್ದಾರೆ. ಅದರಲ್ಲೂ ತುಮಕೂರು ಲೋಕಸಭಾ ಚುನಾವಣೆಗೆ ಭಾರೀ ಡಿಮ್ಯಾಂಡ್‌ ವ್ಯಕ್ತವಾಗಿದೆ. 

ಬಿಜೆಪಿಯ ಮಾಜಿ ಶಾಸಕ ಮಸಾಲೆ ಜಯರಾಂ ತುಮಕೂರಿನಿಂದ ಲೋಕಸಭಾ ಟಿಕೆಟ್‌ ನೀಡಿ ಎಂದು ಬೇಡಿಕೆ ಇಟ್ಟಿದ್ದಾರೆ. ತುಮಕೂರು ಹಾಲಿ ಬಿಜೆಪಿ ಸಂಸದ ಬಸವರಾಜು ವಯಸ್ಸಿನ ಕಾರಣದಿಂದಾಗಿ ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲ ಎಂದು ತಿಳಿಸಿದ್ದಾರೆ.

News Hour: ಸದನದಲ್ಲಿ ಪ್ರತಿಧ್ವನಿಸಿದ ಜೈನಮುನಿ ಹತ್ಯೆ ಕೇಸ್‌!

ಇದರ ಬೆನ್ನಲ್ಲಿಯೇ ತುಮಕೂರು ಕ್ಷೇತ್ರದಿಂದ ಸೋಮಣ್ಣಗೆ ಟಿಕೆಟ್‌ ನೀಡಿ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಹಾಗೇನಾದರೂ ಟಿಕೆಟ್‌ ಸಿಕ್ಕಲ್ಲಿ ಕಾರ್ಯಕರ್ತರು ಅವರನ್ನು ಬೆಂಬಲಿಸಬೇಕು ಎಂದೂ ಮನವಿ ಮಾಡಿದ್ದರು.

Video Top Stories