Asianet Suvarna News Asianet Suvarna News

News Hour: ಸದನದಲ್ಲಿ ಪ್ರತಿಧ್ವನಿಸಿದ ಜೈನಮುನಿ ಹತ್ಯೆ ಕೇಸ್‌!

ಸದನದಲ್ಲಿ ಇಂದೂ ಕೂಡ ಜೈನಮುನಿ ಹತ್ಯೆ ಕೇಸ್‌ ಪ್ರತಿಧ್ವನಿಸಿತು. ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹತ್ಯೆ ಪ್ರಕರಣದ ಕುರಿತಾಗಿ ಉತ್ತರ ನೀಡಿದರೂ, ಡೋಂಟ್‌ಕೇರ್‌ ಎನ್ನದ ಬಿಜೆಪಿ ಸಿಬಿಐ ತನಿಖೆಗೆ ಒತ್ತಾಯಿಸಿದೆ.

ಬೆಂಗಳೂರು (ಜು. 11): ಇಂದು ಸದನದಲ್ಲಿ ಜೈನಮುನಿ ಹತ್ಯೆ ಪ್ರಕರಣದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಮಾತನಾಡಿದರು. ಆದರೆ, ಸಮಾಧಾನಗೊಳ್ಳದ ಬಿಜೆಪಿ, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು.

ಇನ್ನೊಂದೆಡೆ, ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ನೇತೃತ್ವದಲ್ಲಿ ಬಿಜೆಪಿ ನಿಯೋಗ ಕಾಮಕುಮಾರ ನಂದಿ ಮಹಾರಾಜರ ಹಿರೇಕೋಡಿ ಆಶ್ರಮಕ್ಕೆ ಭೇಟಿ ನೀಡಿತು. ಆಶ್ರಮದ ಆವರಣದಲ್ಲಿ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದರು.

Jain monk murder : ಕೊಲೆಗಡುಕರ ರಕ್ಷಣೆಗೆ ನಿಂತ ಕಾಂಗ್ರೆಸ್‌ ಸರ್ಕಾರ: ನಳೀನ್ ಕುಮಾರ ಕಟೀಲ್ ಆರೋಪ

ಜೈನಮುನಿ ಹತ್ಯೆ ಹಾಗೂ ಯುವ ಬ್ರಿಗೇಡ್‌ ಕಾರ್ಯಕರ್ತ ವೇಣುಗೋಪಾಲ್‌ ಹತ್ಯೆ ಪ್ರಕರಣದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಎರಡೂ ಹತ್ಯೆಯಲ್ಲಿ ಸದನದ ಒಳಗೂ, ಹೊರಗೂ ಹೋರಾಟ ಮಾಡಲು ಬಿಜೆಪಿ ರೆಡಿಯಾಗಿದೆ.

Video Top Stories